
ಅರ್ಜುನ್ ಇರಿಗೇಶಿ
ದೋಹಾ (ಪಿಟಿಐ): ಹತ್ತನೇ ಶ್ರೇಯಾಂಕದ ಭಾರತದ ಅರ್ಜುನ್ ಇರಿಗೇಶಿ ಅವರು ಸೋಮವಾರ ಆರಂಭವಾದ ವಿಶ್ವ ಬ್ಲಿಟ್ಝ್ ಚೆಸ್ ಚಾಂಪಿಯನ್‌ಷಿಪ್‌ನ 11 ಸುತ್ತುಗಳ ನಂತರ ಅಗ್ರಸ್ಥಾನದಲ್ಲಿದ್ದಾರೆ.
ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಅವರೂ ಇಷ್ಟೇ ಅಂಕ ಗಳಿಸಿದ್ದರೂ ಟೈಬ್ರೇಕರ್‌ನಲ್ಲಿ ಸದ್ಯ ಎರಡನೇ ಸ್ಥಾನದಲ್ಲಿದ್ದಾರೆ.
ಈ ಚಾಂಪಿಯನ್‌ಷಿಪ್ ಎರಡು ದಿನ ನಡೆಯಲಿದೆ. ಓಪನ್ ವಿಭಾಗದಲ್ಲಿ 19 ಸುತ್ತುಗಳಿದ್ದು, ನಂತರ ಸೆಮಿಫೈನಲ್, ಫೈನಲ್ ಪಂದ್ಯಗಳು ನಡೆಯಲಿವೆ. ಮಹಿಳಾ ವಿಭಾಗದಲ್ಲಿ 15 ಸುತ್ತುಗಳಿದ್ದು, ಸೆಮಿಫೈನಲ್, ಫೈನಲ್ ಪಂದ್ಯಗಳು ನಡೆಯಲಿವೆ.
ಅರ್ಜುನ್ ಎಂಟು ಪಂದ್ಯಗಳನ್ನು ಗೆದ್ದು, ಎರಡು ಡ್ರಾ ಮಾಡಿಕೊಂಡು, ಒಂದು ಪಂದ್ಯ ಸೋತಿದ್ದಾರೆ. ರಷ್ಯಾದ ಡೇನಿಯಲ್ ದುಬೋವ್ (8.5) ಮೂರನೇ ಸ್ಥಾನದಲ್ಲಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಜರ್ಮನಿಯ ಎಲಿನ್ ರೋಬರ್ಸ್ (8.5 ಅಂಕ) ಅವರು 10 ಸುತ್ತುಗಳ ಬಳಿಕ ಅಗ್ರಸ್ಥಾನಕ್ಕೇರಿದ್ದಾರೆ. ರ್‍ಯಾಪಿಡ್ ವಿಭಾಗದಲ್ಲಿ ಚಾಂಪಿಯನ್ ಕಿರೀಟ ಧರಿಸಿದ ರಷ್ಯಾದ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ (8) ಎರಡನೇ ಸ್ಥಾನದಲ್ಲಿದ್ದಾರೆ. ಉಜ್ಬೇಕಿಸ್ತಾನದ ಉಮಿದಾ ಒಮಾನೋವಾ (8) ಮತ್ತು ಬಲ್ಗೇರಿಯಾದ ಅಂಟೊನೇಟಾ ಸ್ಟೆಫಾನೋವಾ (8) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.