ADVERTISEMENT

ರೈಲಿನಿಂದ ಬಿದ್ದು ಯುವ ಬಿಲ್ಗಾರ ಅರ್ಜುನ್ ಸೋನವಣೆ ಸಾವು

ಪಿಟಿಐ
Published 2 ನವೆಂಬರ್ 2025, 15:35 IST
Last Updated 2 ನವೆಂಬರ್ 2025, 15:35 IST
ಅರ್ಜುನ್ ಸೋನವಣೆ
ಅರ್ಜುನ್ ಸೋನವಣೆ   

ಕೋಟಾ: ಮಹಾರಾಷ್ಟ್ರದ ಯುವ ಆರ್ಚರಿ ಪಟು ಅರ್ಜುನ್ ಸೋನವಣೆ ಅವರು ರಾಜಸ್ಥಾನದ ಕೋಟಾ ಜಂಕ್ಷನ್‌ನಲ್ಲಿ ಚಲಿಸುವ ಪ್ಯಾಸೆಂಜರ್ ರೈಲಿನಿಂದ ಬಿದ್ದು ಸಾವನ್ನಪ್ಪಿದ್ದಾರೆ. 

ನಾಸಿಕ್‌ನ 20 ವರ್ಷದ ಅರ್ಜುನ್, ರಾಷ್ಟ್ರಮಟ್ಟದ ಅರ್ಚರಿ ಪಟುವಾಗಿದ್ದಾರೆ. ಪಂಜಾಬ್‌ನ ಭಟಿಂಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ತನ್ನ ತಂಡದ ಸದಸ್ಯರು ಮತ್ತು ಕೋಚ್‌ ಜೊತೆ ತವರಿಗೆ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ. 

ಶನಿವಾರ ರಾತ್ರಿ 8.30ರ ಸುಮಾರಿಗೆ ಕೋಟಾ ಜಂಕ್ಷನ್‌ನಲ್ಲಿ ರೈಲು ನಿಲುಗಡೆಯಾಗುತ್ತಿದ್ದ ವೇಳೆ ಅರ್ಜುನ್‌, ಬೇರೆ ಕೋಚ್‌ಗೆ ತೆರಳಲು ಬಾಗಿಲಿನಲ್ಲಿ ನಿಂತಿದ್ದಾಗ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ತಡರಾತ್ರಿ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಭಾನುವಾರ ಬೆಳಿಗ್ಗೆ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು ಎಂದು ರೈಲ್ವೆ ಪೊಲೀಸ್‌ ಅಧಿಕಾರಿ ದಲ್‌ಚಂದ್ ಸೈನ್ ತಿಳಿಸಿದ್ದಾರೆ.

ಪದವಿ ವ್ಯಾಸಂಗ ಮಾಡುತ್ತಿದ್ದ ಅರ್ಜುನ್ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದ ಆರ್ಚರಿ ಸ್ಪರ್ಧೆಗಳಲ್ಲಿ ಎಂಟು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ ಎಂದು ತಂಡದ ವ್ಯವಸ್ಥಾಪಕ ಅನಿಲ್ ಕಮಲಾಪುರೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.