
ಢಾಕಾ: ಭಾರತದ ಪುರುಷರ ರಿಕರ್ವ್ ತಂಡ, ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌ನ ಫೈನಲ್ ತಲುಪಿದೆ. ಇದರಿಂದ ಈ ಕೂಟದಲ್ಲಿ ದೀರ್ಘಕಾಲದ ಪದಕ ಬರ ಅಂತ್ಯಗೊಳ್ಳುವ ಕ್ಷಣ ಸನ್ನಿಹಿತವಾಗಿದೆ. ಭಾರತ ಚಿನ್ನದ ಪದಕಕ್ಕಾಗಿ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ.
ಮಹಿಳೆಯರ ವಿಭಾಗದಲ್ಲಿ ಕಾಂಪೌಂಡ್ ವಿಭಾಗದ ಹಾಲಿ ಚಾಂಪಿಯನ್ ಭಾರತ ಸತತ ಎರಡನೇ ಬಾರಿ ಫೈನಲ್ ತಲುಪಿದೆ. ಇದರಿಂದಾಗಿ ಭಾರತಕ್ಕೆ ಈ ಕೂಟದಲ್ಲಿ ಎರಡು ಪದಕಗಳು ಖಾತರಿಯಾಗಿವೆ.
ಯಶದೀಪ್ ಭೋಗೆ, ಅತನು ದಾಸ್ ಮತ್ತು ರಾಹುಲ್ ಅವರಿದ್ದ ತಂಡ, ತೀವ್ರ ಸೆಣಸಾಟದಲ್ಲಿ ಕಜಾಕಸ್ತಾನ ತಂಡವನ್ನು 5–3 ರಿಂದ ಸೋಲಿಸಿತು.
ದಕ್ಷಿಣ ಕೊರಿಯಾ ತಂಡ ಈ ಕೂಟಕ್ಕೆ ಪ್ರಮುಖ ಸ್ಪರ್ಧಿಗಳಿಗೆ ವಿಶ್ರಾಂತಿ ನೀಡಿ ಎರಡನೇ ಹಂತದ ತಂಡ ಕಳುಹಿಸಿದೆ.
ಮಹಿಳೆಯರ ವಿಭಾಗದಲ್ಲಿ ದೀಪ್ಶಿಕಾ, ಜ್ಯೋತಿ ಸುರೇಖಾ ವೆನ್ನಂ ಮತ್ತು ಪ್ರತೀಕಾ ಪ್ರದೀಪ್ ಅವರಿದ್ದ ಕಾಂಪೌಂಡ್ ತಂಡ ಸೆಮಿಫೈನಲ್‌ನಲ್ಲಿ 234– 227 ರಿಂದ ಆತಿಥೇಯ ಬಾಂಗ್ಲಾದೇಶ ತಂಡವನ್ನು ಸೋಲಿಸಿತು. ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ. ಕೊರಿಯನ್ನರ ತಂಡ ಸೆಮಿಫೈನಲ್‌ನಲ್ಲಿ 237–227 ರಿಂದ ಇರಾನ್ ಮೇಲೆ ಜಯಗಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.