ADVERTISEMENT

ಏಷ್ಯನ್ ಕ್ರೀಡಾಕೂಟ: ಶೂಟಿಂಗ್‌ನಲ್ಲಿ ರಾಹಿ ಸರ್ನೋಬತ್‌ಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2018, 9:45 IST
Last Updated 22 ಆಗಸ್ಟ್ 2018, 9:45 IST
   

ಪಲೆಂಬಂಗ್‌:ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 18ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್ ರಾಹಿ ಸರ್ನೋಬತ್ ಬುಧವಾರ ಚಿನ್ನದ ಪದಕ ಗೆದಿದ್ದಾರೆ.

ಮಹಿಳಾ ವಿಭಾಗದ 25 ಮೀಟರ್ ಪಿಸ್ತೂಲ್‌ನಲ್ಲಿ ಸರ್ನೋಬತ್ ಚಿನ್ನ ಗೆದ್ದರು. ಈ ಮೂಲಕ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಸಿಕ್ಕಿದೆ.

593 ಅಂಕಗಳನ್ನು ಸಂಪಾದಿಸುವ ಮೂಲಕ ರಾಹಿ ಮೊದಲ ಸ್ಥಾನ ಪಡೆದರು.ಎಲ್ಲಾ ಹಂತದಲ್ಲೂ ಒತ್ತಡ ರಹಿತವಾಗಿ ಗುರಿ ಇಟ್ಟಿದ್ದ ರಾಹಿಸರ್ನೋಬತ್ ಅವರ ವಿಶೇಷವಾಗಿತ್ತು.

ADVERTISEMENT

ಇಲ್ಲಿಯ ತನಕ ಭಾರತದ ಒಟ್ಟು ಪದಕಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ನಾಲ್ಕು ಚಿನ್ನ, ಮೂರು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳು ಸೇರಿವೆ. ಪದಕ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.