ADVERTISEMENT

ಏಷ್ಯನ್ ಕ್ರೀಡಾಕೂಟ: ಆರ್ಚರಿಯಲ್ಲಿ ಜ್ಯೋತಿ ಸುರೇಶ್, ಓಜಸ್‌ಗೆ ಚಿನ್ನ

ಚೀನಾದ ಹಾಂಗ್‌ಜೌದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಆರ್ಚರಿಯಲ್ಲಿ ಭಾರತದ ಜ್ಯೋತಿ ಸುರೇಶ್ ವೆನ್ನಾಮ್ ಅವರು ಚಿನ್ನದ ಪದಕ ಗೆದ್ದಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಅಕ್ಟೋಬರ್ 2023, 3:07 IST
Last Updated 7 ಅಕ್ಟೋಬರ್ 2023, 3:07 IST
<div class="paragraphs"><p>ಓಜಸ್ ದೇವತಾಳೆ, ಜ್ಯೋತಿ ಸುರೇಶ್</p></div>

ಓಜಸ್ ದೇವತಾಳೆ, ಜ್ಯೋತಿ ಸುರೇಶ್

   

ಹಾಂಗ್‌ಜೌ: ಚೀನಾದ ಹಾಂಗ್‌ಜೌದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಆರ್ಚರಿಯಲ್ಲಿ ಭಾರತದ ಜ್ಯೋತಿ ಸುರೇಶ್ ವೆನ್ನಾಮ್ ಅವರು ಚಿನ್ನದ ಪದಕ ಗೆದ್ದಿದ್ದಾರೆ.

ಆರ್ಚರಿ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ ದಕ್ಷಿಣ ಕೊರಿಯಾದ ಕ್ರೀಡಾಳುವನ್ನು ಮಣಿಸಿದ ಜ್ಯೋತಿ ಅವರಿಗೆ ಚಿನ್ನದ ಪದಕ ಲಭಿಸಿತು.

ADVERTISEMENT

ಈಗಾಗಲೇ ಏಷ್ಯನ್ ಕ್ರೀಡಾಕೂಟದ ಆರ್ಚರಿ ಇತರೆ ವಿಭಾಗಗಳಲ್ಲಿ ಜ್ಯೋತಿ ಅವರಿಗೆ ಎರಡು ಚಿನ್ನದ ಪದಕಗಳು ಲಭಿಸಿವೆ. ಇದರೊಂದಿಗೆ ಅವರು ಮೂರು ಚಿನ್ನದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡರು.

ಇನ್ನು ಆರ್ಚರಿ ಪುರುಷರ ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ 21 ವರ್ಷದ ಓಜಸ್ ದೇವತಾಳೆ ಅವರು ಐತಿಹಾಸಿಕವಾಗಿ ಚಿನ್ನದ ಪದಕ ಗೆದ್ದಿದ್ದಾರೆ.

ಇದರೊಂದಿಗೆ ಭಾರತ ಈ ಸಾರಿಯ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ 100 ಪದಕಗಳನ್ನು ಗೆದ್ದಂತಾಗಿದೆ. 25 ಚಿನ್ನ, 35 ಬೆಳ್ಳಿ ಹಾಗೂ 40 ಕಂಚಿನ ಪದಕಗಳು ಭಾರತಕ್ಕೆ ಸಿಕ್ಕಿವೆ.

ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಈ ಸಾರಿ ಅತಿಹೆಚ್ಚು ಪದಕಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಭಾರತ ಮಹಿಳಾ ಕಬಡ್ಡಿ ತಂಡ ಗೆದ್ದ ಚಿನ್ನದ ಪದಕ 100ನೇಯದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.