
ದೋಹಾ: ಬೆಂಗಳೂರಿನ ಕೀರ್ತನಾ ಪಾಂಡ್ಯನ್ ಅವರು ಗುರುವಾರ ನಡೆದ ಪಂದ್ಯದಲ್ಲಿ ಹಾಂಗ್‌ಕಾಂಗ್‌ನ ಚು ಪುಯಿ ಯಿಂಗ್ ಅವರನ್ನು ಹೆಚ್ಚಿನ ಪ್ರಯಾಸವಿಲ್ಲದೇ ಸೋಲಿಸಿ ಏಷ್ಯನ್ ಸ್ನೂಕರ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ತಲುಪಿದರು.
ಕೀರ್ತನಾ 3–1 ರಿಂದ ಜಯಗಳಿಸಿದರು. ಸೆಮಿಫೈನಲ್‌ನಲ್ಲಿ ಅವರು ಹಾಲಿ ವಿಶ್ವ ಚಾಂಪಿಯನ್, ಸ್ವದೇಶದ ಅನುಪಮಾ ರಾಮಚಂದ್ರನ್ ಅವರನ್ನು ಎದುರಿಸಲಿದ್ದಾರೆ.
ಅನುಪಮಾ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಹಾಂಗ್‌ಕಾಂಗ್‌ನ ಯಿ ಟಿಂಗ್ ಚಿಯುಂಗ್ ಅವರನ್ನು 3–2 ಫ್ರೇಮ್‌ಗಳಿಂದ ಸೋಲಿಸಲು ಪ್ರಯಾಸಪಡಬೇಕಾಯಿತು.
ಭಾರತದ ಮೀ ಕಮಾನಿ ಅವರು ಸೆಮಿಫೈನಲ್ ಅವಕಾಶ ಸ್ವಲ್ಪದರಲ್ಲೇ ತಪ್ಪಿಸಿಕೊಂಡರು. ಕ್ವಾರ್ಟರ್‌ಫೈನಲ್‌ನಲ್ಲಿ ಹಾಂಗ್‌ಕಾಂಗ್‌ನ ಹೊ ಯೀ ಕಿ ವಿರುದ್ಧ 2–0 ಮುಂದಿದ್ದ ಅವರು ಅಂತಿಮವಾಗಿ 2–3ರಲ್ಲಿ ಸೋಲನುಭವಿಸಬೇಕಾಯಿತು.
21 ವರ್ಷದೊಳಗಿನ ಪುರುಷರ ವಿಭಾಗದ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತದ ಆರವ್ ಸಂಚೇತಿ 1–4 ರಿಂದ ಮಲೇಷ್ಯಾದ ಮುಹಮ್ಮದ್ ವಫಿ ಅವರಿಗೆ ಮಣಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.