ADVERTISEMENT

Asian Games | ಬ್ಯಾಡ್ಮಿಂಟನ್: ಕ್ವಾರ್ಟರ್‌ಗೆ ಸಿಂಧು ಬಳಗ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2023, 23:07 IST
Last Updated 28 ಸೆಪ್ಟೆಂಬರ್ 2023, 23:07 IST
ಪಿ.ವಿ. ಸಿಂಧು
ಪಿ.ವಿ. ಸಿಂಧು   

ಹಾಂಗ್‌ಝೌ: ಒಲಿಂಪಿಯನ್ ಪಿ.ವಿ. ಸಿಂಧು ನಾಯಕತ್ವದ  ಭಾರತ  ಮಹಿಳಾ  ತಂಡವು ಏಷ್ಯನ್ ಗೇಮ್ಸ್‌ ಬ್ಯಾಡ್ಮಿಂಟನ್‌ ಕ್ವಾರ್ಟರ್‌ಫೈನಲ್ ಪ್ರವೇಶಿಸಿತು.

ಗುರುವಾರ ನಡೆದ ಪಂದ್ಯದಲ್ಲಿ ಭಾರತ  ತಂಡವು 3–0ಯಿಂದ ಮಂಗೋಲಿಯಾ ವಿರುದ್ಧ ಜಯಿಸಿತು.

ಎರಡು ಒಲಿಂಪಿಕ್ ಕೂಟಗಳಲ್ಲಿ ಪದಕ ಗೆದ್ದಿರುವ ಸಿಂಧು ಮೊದಲ ಪಂದ್ಯ ಆಡಿದರು. ಆ ಸಿಂಗಲ್ಸ್‌ ನಲ್ಲಿ ಅವರು 21–3, 21–3ರಿಂದ ಮಂಗೋಲಿಯಾದ ಮೈಗ್‌ಮಾರ್ಟಸೆರೆನ್ ಗನಾಬಾಟರ್ ವಿರುದ್ಧ ಗೆದ್ದರು. ಎರಡನೇ ಸಿಂಗಲ್ಸ್‌ನಲ್ಲಿ ಅಷ್ಮಿತಾ ಚಲಿಹಾ 21–2, 21–3ರಿಂದ ಕೆರ್ಲೆನ್ ಡಾರ್ಕ್‌ಬಾತರ್  ವಿರುದ್ಧ ಜಯಿಸಿದರು. ಇನ್ನೊಂದು ಪಂದ್ಯದಲ್ಲಿ ಅನುಪಮಾ ಉಪಾಧ್ಯಾಯ 21–0, 21–2ರಿಂದ ಖುಲಾಂಗೂ ಬಾತರ್ ವಿರುದ್ಧ ಗೆದ್ದರು.

ADVERTISEMENT

ಭಾರತ ತಂಡವು ಕ್ವಾರ್ಟರ್‌ಫೈನಲ್‌ನಲ್ಲಿ ಬಲಿಷ್ಠ ಥಾಯ್ಲೆಂಡ್ ತಂಡವನ್ನು ಎದುರಿಸಲಿದೆ. ಮಾಜಿ ವಿಶ್ವ ಚಾಂಪಿಯನ್ ರಚಾನೊಕ್ ಇಂಟನಾನ್, ಪಾರ್ನ್‌ಪಾವಿ ಚೋಚುವಾಂಗ್ ಮತ್ತು ಸುಪಾನಿದಾ ಕ್ಯಟೆಹಾಂಗ್ ಅವರು ಥಾಯ್ಲೆಂಡ್ ತಂಡದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.