
ಚೆಂಗ್ಡು: ಭಾರತದ ಆಟಗಾರ್ತಿಯರಾದ ದೀಕ್ಷಾ ಸುಧಾಕರ್ ಮತ್ತು ಲಕ್ಷ್ಯಾರಾಜೇಶ್ ಅವರು ಶನಿವಾರ ಬ್ಯಾಡ್ಮಿಂಟನ್ ಏಷ್ಯಾ 17 ಮತ್ತು 15 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ಪ್ರವೇಶಿಸಿದರು.
17 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಸುತ್ತಿನಲ್ಲಿ ದೀಕ್ಷಾ ಮತ್ತು ಲಕ್ಷ್ಯಾ ಮುಖಾಮುಖಿಯಾಗುತ್ತಿದ್ದು, ಹೀಗಾಗಿ, ಯಾರೇ ಗೆದ್ದರೂ ಭಾರತಕ್ಕೆ ಚಿನ್ನ ಖಚಿತವಾಗಿದೆ.
ಸೆಮಿಫೈನಲ್‌ನಲ್ಲಿ ದೀಕ್ಷಾ 21-8, 21-17ರಿಂದ ತೈವಾನ್‌ನ ಯುನ್ ಚಿಯಾವೊ ಸು ವಿರುದ್ಧ; ಲಕ್ಷ್ಯಾ21-15, 21-19ರಿಂದ ಜಪಾನ್‌ನ ರಿಯಾ ಹಾಗಾ ವಿರುದ್ಧ ಗೆಲುವು ಸಾಧಿಸಿದರು.
15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಶೈನಾ ಮಣಿಮುತ್ತು ಫೈನಲ್ ತಲುಪಿದರು. ಶೈನಾ ಸೆಮಿಫೈನಲ್‌ನಲ್ಲಿ 21-12, 16-21, 21-16ರಿಂದ ಚೀನಾದ ಯುನ್ ಜೀ ಯಿ ಅವರನ್ನು ಮಣಿಸಿದರು. ಫೈನಲ್‌ನಲ್ಲಿ ಜಪಾನ್‌ನ ಚಿಹಾರು ಟೊಮಿಟಾ ಎದುರಾಳಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.