
ಕಟಕ್: ಭಾರತದ ಶಟ್ಲರ್‌ಗಳಾದ ಉನ್ನತಿ ಹೂಡಾ, ತಸ್ನಿಮ್ ಮಿರ್, ಇಶಾರಾಣಿ ಬರೂವ, ಕಿರಣ್ ಜಾರ್ಜ್ ಮತ್ತು ರೌನಕ್ ಚೌಹಾಣ್ ಅವರು ಒಡಿಶಾ ಮಾಸ್ಟರ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದರು.
ಪುರುಷರ ಸಿಂಗಲ್ಸ್‌ನ ಕಾರ್ಟರ್ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಕಿರಣ್ 21-11, 21-17ರಿಂದ ಸ್ವದೇಶದ ರಿತ್ವಿಕ್ ಸಂಜೀವಿ ಅವರನ್ನು ಮಣಿಸಿದರು. ಅವರು ನಾಲ್ಕರ ಘಟ್ಟದ ಪಂದ್ಯದಲ್ಲಿ ರೌನಕ್ ಅವರನ್ನು ಎದುರಿಸಲಿದ್ದಾರೆ. ರೌನಕ್ ಅವರು 21-19, 22-20ರಿಂದ ಏಳನೇ ಶ್ರೇಯಾಂಕದ ಶಂಕರ್ ಮುತ್ತುಸಾಮಿ ಸುಬ್ರಮಣಿಯನ್ ಅವರಿಗೆ ಆಘಾತ ನೀಡಿದರು.
ಇಂಡೊನೇಷ್ಯಾದ ಮುಹಮ್ಮದ್ ಯೂಸುಫ್ 49 ನಿಮಿಷಗಳ ಹೋರಾಟದಲ್ಲಿ 21-9, 22-20ರಿಂದ ಅಗ್ರ ಶ್ರೇಯಾಂಕದ ತರುಣ್ ಮನ್ನೆಪಳ್ಳಿ ಅವರನ್ನು ಸೋಲಿಸಿದರು.
ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ತನ್ವಿ ಶರ್ಮಾ ಅವರಿಗೆ ಆಘಾತವಾಯಿತು. ತಾನ್ಯಾ ಹೇಮಂತ್ 21-18, 21-17 ರಿಂದ ತನ್ವಿ ಅವರನ್ನು ಹಿಮ್ಮೆಟ್ಟಿಸಿದರು. ತಾನ್ಯಾ ಮುಂದಿನ ಸುತ್ತಿನಲ್ಲಿ ಸ್ವದೇಶದ ಇಶಾರಾಣಿ ಬರೂವ ಅವರನ್ನು ಎದುರಿಸಲಿದ್ದಾರೆ.
ಎರಡನೇ ಶ್ರೇಯಾಂಕದ ಪೋರ್ನ್‌ಪಿಚಾ ಚೊಯೀಕಿವಾಂಗ್ (ಮಲೇಷ್ಯಾ) ಅವರನ್ನು ಮಣಿಸಿ ಅಭಿಯಾನ ಆರಂಭಿಸಿದ್ದ ಇಶಾರಾಣಿ ಅವರು ಕ್ವಾರ್ಟರ್ ಫೈನಲ್‌ನಲ್ಲಿ 21-16, 21-14ರಿಂದ ಆರನೇ ಶ್ರೇಯಾಂಕದ ಅನ್ಮೋಲ್ ಖರ್ಬ್ ಅವರನ್ನು ಸೋಲಿಸಿದರು.
ಅಗ್ರ ಶ್ರೇಯಾಂಕದ ಉನ್ನತಿ 21-16, 21-15ರಿಂದ ಅನುಪಮಾ ಉಪಾಧ್ಯಾಯ ವಿರುದ್ಧ ಜಯ ಸಾಧಿಸಿದರು. ಅವರು ಮುಂದಿನ ಸುತ್ತಿನಲ್ಲಿ ತಸ್ನಿಮ್ ಅವರ ಸವಾಲನ್ನು ಎದುರಿಸುವರು. ತಸ್ನಿಮ್ 21-19, 21-6ರಿಂದ ಏಳನೇ ಶ್ರೇಯಾಂಕದ ತೈವಾನ್‌ನ ತುಂಗ್ ಸಿಯೊ-ಟಾಂಗ್ ಅವರನ್ನು ಮಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.