ADVERTISEMENT

ಆಹ್ವಾನ ಬ್ಯಾಡ್ಮಿಂಟನ್‌ ಸೆಮಿಗೆ ಫಿರೋಜ್‌

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 20:00 IST
Last Updated 28 ಡಿಸೆಂಬರ್ 2019, 20:00 IST

ಬಳ್ಳಾರಿ: ಕಲಬುರ್ಗಿಯ ಫಿರೋಜ್‌,ನಗರದಲ್ಲಿ ಶನಿವಾರ ಆರಂಭವಾದ ರಾಜ್ಯಮಟ್ಟದ ಮುಕ್ತಆಹ್ವಾನಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ ಸೆಮಿಫೈನಲ್‌ ತಲುಪಿದ್ದಾರೆ.

ಜಿಲ್ಲಾ ಬ್ಯಾಡ್ಮಿಂಟನ್‌ ಸಂಸ್ಥೆ ಆಯೋಜಿಸಿರುವ ಎರಡು ದಿನಗಳ ಟೂರ್ನಿಯ ಪಂದ್ಯದಲ್ಲಿ ಶುಕ್ರವಾರ ಫಿರೋಜ್‌ 30–18ರಲ್ಲಿ ತಮ್ಮ ಊರಿನವರೇ ಆದ ಸುನೀಲ್ ಎದುರು ಗೆದ್ದರು. ಇದೇ ವಿಭಾಗದ ಇತರ ಪಂದ್ಯಗಳಲ್ಲಿಬೆಳಗಾವಿಯ ನವನೀತ್ 30–20ರಲ್ಲಿಹುಬ್ಬಳ್ಳಿಯ ಮನೋಹರ್ ದಾಟಿನಲ್ ಮೇಲೂ,ಕಲಬುರ್ಗಿಯ ಆಸೀಫ್ 30–27ರಲ್ಲಿಬಳ್ಳಾರಿಯ ನಿತಿನ್ ವಿರುದ್ಧವೂ,ಬೆಳಗಾವಿಯ ಅನೀಶ್ ಉಪಾಧ್ಯಾಯ 30–21ರಲ್ಲಿಬಳ್ಳಾರಿ ವೀರೇಶ್ ಮೇಲೂ ಜಯಿಸಿದರು.

15 ವರ್ಷದ ಒಳಗಿನವರ ಬಾಲಕಿಯರ ವಿಭಾಗದಲ್ಲಿ ಚಿತ್ರದುರ್ಗದ ಕೆ. ಶ್ರೇಯಾ 30-10ರಲ್ಲಿಹುಬ್ಬಳ್ಳಿಯ ಅಭಿಶ್ರೀ ಮೇಲೂ,ಬಳ್ಳಾರಿಯ ಆರ್ಯಾ ಜೋಶಿ 30–19ರಲ್ಲಿ ಬೆಳಗಾವಿಯ ಎಸ್‌. ಸೃಷ್ಟಿ ವಿರುದ್ಧವೂ,ಬಳ್ಳಾರಿಯ ಅಚಲಾ ಆಚಾರ್ಯ 30–21ರಲ್ಲಿ ಬಳ್ಳಾರಿಯ ಮೇಘನಾ ಮೇಲೂ,ಹುಬ್ಬಳ್ಳಿಯ ಎಸ್‌.ಕ್ಷಿತಿ 30–2ರಲ್ಲಿಬಳ್ಳಾರಿಯ ಕಿರಣ್ ಶರ್ಮಾ ವಿರುದ್ಧವೂ ಗೆಲುವು ಸಾಧಿಸಿದರು.

ADVERTISEMENT

11 ವರ್ಷದ ಒಳಗಿನರ ಬಾಲಕಿಯರ ವಿಭಾಗದಲ್ಲಿಹುಬ್ಬಳ್ಳಿಯ ಅಭಿಶ್ರೀ 30–8ರಲ್ಲಿಬಳ್ಳಾರಿಯ ಸಮುದ್ಯತಾ ಮೇಲೂ,ಉಡುಪಿಯ ಅವನಿ 30–17ರಲ್ಲಿಚಿತ್ರದುರ್ಗದ ಸಂಜನಾ ಕುಮಾರ್ ವಿರುದ್ಧವೂ,ಬಳ್ಳಾರಿಯ ರಿದ್ಧಿಮಾ 30–16ರಲ್ಲಿಹುಬ್ಬಳ್ಳಿಯ ತನುಶ್ರೀ ಮೇಲೂ,ಬಳ್ಳಾರಿಯ ಹಸೀಕಾ 30–17ರಲ್ಲಿಬಳ್ಳಾರಿಯ ಜೆ. ಜಂಶಾ ವಿರುದ್ಧವೂ ಗೆಲುವು ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.