ADVERTISEMENT

ಬಾಲ್‌ಬ್ಯಾಡ್ಮಿಂಟನ್‌: ಆಳ್ವಾಸ್‌ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 20:00 IST
Last Updated 13 ಅಕ್ಟೋಬರ್ 2019, 20:00 IST
ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ತಂಡ. ಎಡದಿಂದ; ಚಂದನಾ, ಕವನಾ, ಸುಷ್ಮಿತಾ, ಜಯಲಕ್ಷ್ಮಿ, ಪಲ್ಲವಿ, ಲಾವಣ್ಯಾ ಮತ್ತು ಎಸ್‌.ಕೆ. ಪಲ್ಲವಿ
ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ತಂಡ. ಎಡದಿಂದ; ಚಂದನಾ, ಕವನಾ, ಸುಷ್ಮಿತಾ, ಜಯಲಕ್ಷ್ಮಿ, ಪಲ್ಲವಿ, ಲಾವಣ್ಯಾ ಮತ್ತು ಎಸ್‌.ಕೆ. ಪಲ್ಲವಿ   

ಬಳ್ಳಾರಿ: ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ತಂಡದವರು ಇಲ್ಲಿನ ‘ವಾಕ್‌ ಮತ್ತು ಶ್ರವಣ’ ಸಂಸ್ಥೆ ಆಶ್ರಯದಲ್ಲಿ ನಡೆದ ಅಖಿಲ ಭಾರತ ಆಹ್ವಾನಿತ ಬಾಲ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದಾರೆ. ಪುರುಷರ ವಿಭಾಗದ ಪ್ರಶಸ್ತಿ ಚೆನ್ನೈನ ದಕ್ಷಿಣ ರೈಲ್ವೆ ‘ಎ’ ತಂಡದ ಪಾಲಾಯಿತು.

ಆಳ್ವಾಸ್‌ ತಂಡ ಎರಡನೇ ಬಾರಿಗೆ ಈ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ. ಸೂಪರ್‌ ಲೀಗ್‌ ಮಾದರಿಯ ಪಂದ್ಯಗಳಲ್ಲಿ ಆಳ್ವಾಸ್‌ ತಂಡ ಕೊಯಮತ್ತೂರಿನ ನಿರ್ಮಲಾ ಕಾಲೇಜು, ದಿಂಡಿಗಲ್‌ನ ಪಿಎಸ್‌ಎನ್‌ಎ ತಂಡ ಹಾಗೂ ಶ್ರವಣ ಫೈವ್ಸ್‌ ತಂಡಗಳನ್ನು ನೇರ ಸೆಟ್‌ಗಳಿಂದ ಮಣಿಸಿ ಈ ಸಾಧನೆ ಮಾಡಿದೆ.

‌ಎರಡನೇ ಸ್ಥಾನ ಶ್ರವಣ ಫೈವ್ಸ್‌ ಪಡೆಯಿತು. ಪಿಎಸ್‌ಎನ್‌ಎ ಎಂಜಿನಿಯ ರಿಂಗ್‌ ಕಾಲೇಜು ಮತ್ತು ನಿರ್ಮಲಾ ಕಾಲೇಜು ಕ್ರಮವಾಗಿ ನಂತರದ ಎರಡು ಸ್ಥಾನ ಪಡೆದವು.

ADVERTISEMENT

ಪುರುಷರ ವಿಭಾಗದಲ್ಲಿ ಚೆನ್ನೈನ ಐಸಿಎಫ್‌ ದ್ವಿತೀಯ, ಆಳ್ವಾಸ್‌ ಶಿಕ್ಷಣ ಸಂಸ್ಥೆ ತೃತೀಯ ಸ್ಥಾನ ಗಳಿಸಿದವು.

ದಕ್ಷಿಣ ರೈಲ್ವೆ ತಂಡದ ರಾಜೇಶ (ಪುರುಷರ ವಿಭಾಗ), ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಜಯಲಕ್ಷ್ಮಿ (ಮಹಿಳಾ ವಿಭಾಗ) ಟೂರ್ನಿಯ ಶ್ರೇಷ್ಠ ಗೌರವ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.