ADVERTISEMENT

ಸೋಲು ತಪ್ಪಿಸಿಕೊಂಡ ಬುಲ್ಸ್

ಪ್ರೊ ಕಬಡ್ಡಿ: ಟೈ ಪಂದ್ಯದಲ್ಲಿ ದಬಂಗ್ ಡೆಲ್ಲಿ ತಂಡ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 18:48 IST
Last Updated 4 ಫೆಬ್ರುವರಿ 2022, 18:48 IST
ಎದುರಾಳಿ ಅಂಗಣದಿಂದ ತಪ್ಪಿಸಕೊಂಡ ಪವನ್ ಶೆರಾವತ್‌
ಎದುರಾಳಿ ಅಂಗಣದಿಂದ ತಪ್ಪಿಸಕೊಂಡ ಪವನ್ ಶೆರಾವತ್‌   

ಬೆಂಗಳೂರು: ದಬಂಗ್ ಡೆಲ್ಲಿ ಮತ್ತು ಬೆಂಗಳೂರು ಬುಲ್ಸ್ ತಂಡದ ನಾಯಕರ ಜಿದ್ದಾಜಿದ್ದಿಯ ಆಟದ ಫಲವಾಗಿ ಪ್ರೊ ಕಬಡ್ಡಿ ಪಂದ್ಯವು ರೋಚಕ ಟೈನಲ್ಲಿ ಮುಕ್ತಾಯವಾಯಿತು.

ವೈಟ್‌ಫೀಲ್ಡ್‌ನಲ್ಲಿರುವ ಗ್ರ್ಯಾಂಡ್ ಶೆರಟಾನ್ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಪಂದ್ಯವು 36–36 ರಿಂದ ಟೈ ಆಯಿತು.

ಬೆಂಗಳೂರು ತಂಡದ ನಾಯಕ ಪವನ್ ಶೆರಾವತ್ 17 ಮತ್ತು ಡೆಲ್ಲಿ ತಂಡದ ನಾಯಕ ನವೀನ್ ಕುಮಾರ್ 13 ಅಂಕಗಳನ್ನು ಗಳಿಸಿದರು. ಇಬ್ಬರೂ ರೇಡಿಂಗ್‌ನಲ್ಲಿ ಮಿಂಚಿದರು.

ADVERTISEMENT

ಅರ್ಧವಿರಾಮದ ವೇಳೆ ಡೆಲ್ಲಿ ತಂಡವು 18–14ರಿಂದ ಮುನ್ನಡೆಯಲ್ಲಿತ್ತು. ಆದರೆ ವಿರಾಮದ ನಂತರ ಪವನ್ ಮಿಂಚಿದರು. ಇದರಿಂದಾಗಿ ಎರಡನೇ ಅವಧಿಯಲ್ಲಿ ಬುಲ್ಸ್ ತಂಡವು 22 ಅಂಕಗಳನ್ನು ಗಳಿಸಿದರೆ, ಡೆಲ್ಲಿ ತಂಡವು 18 ಪಾಯಿಂಟ್ಸ್ ಪಡೆಯಿತು. ಇದರಿಂದಾಗಿ ತಂಡವು ಸೋಲು ತಪ್ಪಿಸಿಕೊಂಡಿತು.

ಇನ್ನೊಂದು ಪಂದ್ಯದಲ್ಲಿ; ಹರಿಯಾಣ ಸ್ಟೀಲರ್ಸ್‌ ತಂಡವು 46–29 ರಿಂದ ಬೆಂಗಾಲ್ ವಾರಿಯರ್ಸ್ ತಂಡದ ವಿರುದ್ಧ ಜಯಿಸಿದೆ. ಹರಿಯಾಣ ತಂಡದ ನಾಯಕ ವಿಕಾಶ್ ಖಂಡಾಲ 10 ಮತ್ತು ಬೆಂಗಾಲ್ ತಂಡದ ನಾಯಕ ಮಣಿಂದರ್ ಸಿಂಗ್ 13 ಅಂಕಗಳನ್ನು ಗಳಿಸಿದ್ದಾರೆ. ಹರಿಯಾಣ ತಂಡದ ರೇಡರ್ ಆಶಿಶ್ (6), ವಿನಯ್ (8) ಮತ್ತು ಡಿಫೆಂಡರ್ (3) ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.