ADVERTISEMENT

ಬ್ಯಾಸ್ಕೆಟ್‌ಬಾಲ್‌: ಎಎಸ್‌ಸಿ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 20:25 IST
Last Updated 11 ನವೆಂಬರ್ 2019, 20:25 IST

ಬೆಂಗಳೂರು: ಎಎಸ್‌ಸಿ ತಂಡದವರು ರಾಜ್ಯ ಅಸೋಸಿಯೇಷನ್‌ ಕಪ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಪ್ರಶಸ್ತಿ ಗೆದ್ದಿದ್ದಾರೆ.

ಸೋಮವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ ಲೀಗ್‌ನಲ್ಲಿ ಎಎಸ್‌ಸಿ 82–71 ಪಾಯಿಂಟ್ಸ್‌ನಿಂದ ಬ್ಯಾಂಕ್‌ ಆಫ್‌ ಬರೋಡ ತಂಡವನ್ನು ಮಣಿಸಿತು. ಬರೋಡ ತಂಡ ರನ್ನರ್ಸ್‌ ಅಪ್‌ ಆಯಿತು.

ಯಂಗ್‌ ಒರಿಯನ್ಸ್‌ ಮತ್ತು ಸದರ್ನ್‌ ಬ್ಲೂಸ್‌ ತಂಡಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದವು. ಮತ್ತೊಂದು ಪಂದ್ಯದಲ್ಲಿ ಒರಿಯನ್ಸ್‌ 63–53ರಿಂದ ಬ್ಲೂಸ್‌ ಎದುರು ವಿಜಯಿಯಾಯಿತು.

ADVERTISEMENT

ಮಹಿಳಾ ವಿಭಾಗದಲ್ಲಿ ನೈರುತ್ವ ರೈಲ್ವೆ ತಂಡ ಚಾಂಪಿಯನ್‌ ಆಯಿತು.

ಸೆಮಿಫೈನಲ್‌ ಲೀಗ್‌ ಹಣಾಹಣಿಯಲ್ಲಿ ಈ ತಂಡ 68–42 ಪಾಯಿಂಟ್ಸ್‌ನಿಂದ ಡಿವೈಇಎಸ್‌ ವಿದ್ಯಾನಗರ ವಿರುದ್ಧ ಗೆದ್ದಿತು.

ಇನ್ನೊಂದು ಹೋರಾಟದಲ್ಲಿ ಮೌಂಟ್ಸ್‌ ಕ್ಲಬ್‌ 45–43ರಲ್ಲಿ ಬೀಗಲ್ಸ್‌ ಕ್ಲಬ್‌ ತಂಡವನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.