ADVERTISEMENT

ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌: ಓರಿಯನ್ಸ್‌, ನೈರುತ್ವ ರೈಲ್ವೆಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2025, 16:10 IST
Last Updated 29 ನವೆಂಬರ್ 2025, 16:10 IST
<div class="paragraphs"><p>ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಯಂಗ್‌ ಓರಿಯನ್ಸ್ ಪುರುಷರ ತಂಡ. (ನಿಂತವರು) ಎಡದಿಂದ;&nbsp;ಸೂರಜ್, ಶಶಾಂಕ್, ಸಹಾಯಕ ಕೋಚ್ ರವಿ ಕುಮಾರ್, ಕಾರ್ಯದರ್ಶಿ ಗುಣಶೇಖರ್, ಮುಖ್ಯ ಕೋಚ್ ಪುನೀತ್ ಸುರೇಶ್, ಶ್ರೇಯಸ್, ಗೌತಮ್, ಅಭಿಷೇಕ್ ಗೌಡ; (ಮಂಡಿಯೂರಿದವರು)&nbsp;ನಾಥನ್, ಅರ್ಜುನ್ ಯಾದವ್, ಧೀರಜ್ ರೆಡ್ಡಿ ಮತ್ತು ಸುಮಂತ್&nbsp;</p></div>

ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಯಂಗ್‌ ಓರಿಯನ್ಸ್ ಪುರುಷರ ತಂಡ. (ನಿಂತವರು) ಎಡದಿಂದ; ಸೂರಜ್, ಶಶಾಂಕ್, ಸಹಾಯಕ ಕೋಚ್ ರವಿ ಕುಮಾರ್, ಕಾರ್ಯದರ್ಶಿ ಗುಣಶೇಖರ್, ಮುಖ್ಯ ಕೋಚ್ ಪುನೀತ್ ಸುರೇಶ್, ಶ್ರೇಯಸ್, ಗೌತಮ್, ಅಭಿಷೇಕ್ ಗೌಡ; (ಮಂಡಿಯೂರಿದವರು) ನಾಥನ್, ಅರ್ಜುನ್ ಯಾದವ್, ಧೀರಜ್ ರೆಡ್ಡಿ ಮತ್ತು ಸುಮಂತ್ 

   

ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ್‌

ಬೆಂಗಳೂರು: ಯಂಗ್‌ ಓರಿಯನ್ಸ್‌ ಸ್ಪೋರ್ಟ್ಸ್‌ ಕ್ಲಬ್‌ ಮತ್ತು ನೈಋತ್ಯ ರೈಲ್ವೆ ತಂಡಗಳು ಶನಿವಾರ ರಾಜ್ಯ ಅಸೋಸಿಯೇಷನ್‌ ಕಪ್‌ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಪ್ರಶಸ್ತಿಯನ್ನು ಗೆದ್ದುಕೊಂಡವು.

ADVERTISEMENT

ಪುರುಷರ ವಿಭಾಗದಲ್ಲಿ ಬ್ಯಾಂಕ್‌ ಆಫ್‌ ಬರೋಡಾ ತಂಡ ರನ್ನರ್ಸ್‌ ಅಪ್ ಆಯಿತು. ಡಿವೈಇಎಸ್‌ ಬೆಂಗಳೂರು ಮೂರನೇ ಸ್ಥಾನ ಗಳಿಸಿತು. ಮಹಿಳೆಯರ ವಿಭಾಗದಲ್ಲಿ ಬೀಗಲ್ಸ್‌ ಬಿ.ಸಿ ತಂಡವು ರನ್ನರ್ಸ್‌ ಅಪ್‌ ಆದರೆ, ಮೌಂಟ್ಸ್‌ ಕ್ಲಬ್‌ ತಂಡ ಮೂರನೇ ಸ್ಥಾನ ಪಡೆಯಿತು. ‌

ಎರಡು ವಿಭಾಗಗಳ ವಿಜೇತ ತಂಡಗಳು ₹50 ಸಾವಿರ, ರನ್ನರ್ಸ್‌ ಅಪ್‌ ತಂಡಗಳು ₹25 ಸಾವಿರ ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ₹ 15 ಸಾವಿರ ನಗದು ಬಹುಮಾನ ಪಡೆದವು. ಫಿಬಾ ಏಷ್ಯಾ ಮತ್ತು ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್‌, ಡಿವೈಇಎಸ್‌ ಆಯುಕ್ತ ಆರ್‌.ಚೇತನ್‌, ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆ ಉಪಾಧ್ಯಕ್ಷರಾದ ಆರ್‌.ರಾಜನ್‌, ಎಸ್‌. ಗುಣಶೇಖರ್ ವಿಜೇತ ತಂಡಗಳಿಗೆ ಬಹುಮಾ ವಿತರಿಸಿದರು.

ಕಂಠೀರವ ಒಳಾಂಗಣ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್‌ ಕೋರ್ಟ್‌ನಲ್ಲಿ ಶನಿವಾರ ನಡೆದ ಪುರುಷರ ಫೈನಲ್‌ ಲೀಗ್‌ ಪಂದ್ಯದಲ್ಲಿ ಓರಿಯನ್ಸ್‌ ತಂಡವು 68–43ರಿಂದ ಡಿವೈಇಎಸ್‌ ಬೆಂಗಳೂರು ತಂಡವನ್ನು ಮಣಿಸಿತು. ಮಹಿಳೆಯರ ಫೈನಲ್‌ ಲೀಗ್‌ನ ಪಂದ್ಯದಲ್ಲಿ ನೈರುತ್ಯ ರೈಲ್ವೆ ತಂಡವು 76–74ರಿಂದ ಬೀಗಲ್ಸ್‌ ಬಿ.ಸಿ ತಂಡವನ್ನು ಸೋಲಿಸಿತು.

ರಾಜ್ಯ ಅಸೋಸಿಯೇಷನ್‌ ಕಪ್‌ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ನೈರುತ್ಯ ರೈಲ್ವೆ ಮಹಿಳೆಯರ ತಂಡ. (ನಿಂತವರು) ಎಡದಿಂದ; ಸತ್ಯಾ ಅನುಷಾ ಸೂರ್ಯಾ (ನಾಯಕ) ರುತ್ ಸೋಬಾನಾ ಬಾಲಾ (ಕುಳಿತವರು) ಭಾಂದವ್ಯಾ ಮತ್ತು ಶೃತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.