ADVERTISEMENT

ಬ್ಯಾಸ್ಕೆಟ್‌ಬಾಲ್: ‘ಮೈಕಾ’, ‘ನಿಟ್ಟೆ’ ಗೆಲುವಿನ ಆರಂಭ

‘ಚಾಲೆಂಜರ್ಸ್‌ ಕಪ್‌’ ಅಂತರರಾಜ್ಯ ಪದವಿ ಕಾಲೇಜು ಮಟ್ಟದ ಟೂರ್ನಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 19:11 IST
Last Updated 25 ನವೆಂಬರ್ 2022, 19:11 IST
ಮೈಸೂರಿನ ಜೆಎಸ್‌ಎಸ್‌ ಎಎಚ್‌ಇಆರ್‌ ತಂಡ ಹಾಗೂ ಸೇಲಂನ ಎವಿಎಸ್ ಕಾಲೇಜು ಆಟಗಾರರ ಪೈಪೋಟಿ
ಮೈಸೂರಿನ ಜೆಎಸ್‌ಎಸ್‌ ಎಎಚ್‌ಇಆರ್‌ ತಂಡ ಹಾಗೂ ಸೇಲಂನ ಎವಿಎಸ್ ಕಾಲೇಜು ಆಟಗಾರರ ಪೈಪೋಟಿ   

ಮೈಸೂರು:ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಕಾಲೇಜು ಹಾಗೂ ಮೈಸೂರಿನ ಮೈಕಾ ಕಾಲೇಜು ತಂಡಗಳು ಇಲ್ಲಿನಮೈಸೂರು ವಿಶ್ವವಿದ್ಯಾಲಯದ ಬ್ಯಾಸ್ಕೆಟ್‌ಬಾಲ್‌ ಅಂಗಳದಲ್ಲಿ ಶುಕ್ರವಾರ ಆರಂಭವಾದ ‘ಚಾಲೆಂಜರ್ಸ್‌ ಕಪ್‌’ ಅಂತರರಾಜ್ಯ ಪದವಿ ಕಾಲೇಜು ಬ್ಯಾಸ್ಕೆಟ್‌ ಬಾಲ್‌ ಟೂರ್ನಿಯಲ್ಲಿ ಜಯಗಳಿಸಿದವು.

ಮೈಕಾ ಕಾಲೇಜು ತಂಡದ ಆಟಗಾರರು 61–21 ಪಾಯಿಂಟ್‌ ಅಂತರದಲ್ಲಿಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ತಂಡದ ವಿರುದ್ಧ ಗೆದ್ದರು. ಮೈಕಾ ತಂಡದ ದೀಪಕ್‌ 14 ಪಾಯಿಂಟ್‌ ಗಳಿಸಿದರು. ಜೆಎಸ್‌ಎಸ್‌ನ ಶ್ರೇಯಸ್‌ 7 ಪಾಯಿಂಟ್‌ ಕಲೆಹಾಕಿದರು.

ನಿಟ್ಟೆ ಮೀನಾಕ್ಷಿ ಕಾಲೇಜು ತಂಡವು 70–44ರಿಂದ ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್‌ ಕಾಲೇಜು ತಂಡದ ವಿರುದ್ಧ ಜಯಿಸಿತು. ನಿಟ್ಟೆ ತಂಡದ ಧೀರಜ್‌ ತಂಡಕ್ಕೆ 15 ಪಾಯಿಂಟ್‌ ಕಾಣಿಕೆ ನೀಡಿದರು. ವಿದ್ಯಾವರ್ಧಕ ತಂಡದ ಅಭಿರೂಪ್‌ (6 ಪಾಯಿಂಟ್‌) ಉತ್ತಮವಾಗಿ
ಆಡಿದರು.

ADVERTISEMENT

ತಮಿಳುನಾಡಿನ ಸೇಲಂನ ಎವಿಎಸ್‌ ಕಾಲೇಜು ತಂಡವು 66–25 ಪಾಯಿಂಟ್‌ಗಳಲ್ಲಿ ಜೆಎಸ್‌ಎಸ್‌ ಎಎಚ್‌ಇಆರ್‌ ವಿರುದ್ಧ ಗೆದ್ದಿತು. ಎವಿಎಸ್‌ನ ಖಲೀಲ್‌ 12 ಪಾಯಿಂಟ್‌ ಗಳಿಸಿದರು.‌ಮತ್ತೊಂದು ಪಂದ್ಯದಲ್ಲಿ ಚೆನ್ನೈನ ಸತ್ಯಭಾಮ ವಿಶ್ವವಿದ್ಯಾಲಯ ತಂಡವುಲಕ್ಷ್ಮಣ್‌ (14‍ಪಾಯಿಂಟ್‌) ಅವರ ಉತ್ತಮ ಆಟದ ಬಲದಿಂದ 64–44 ಪಾಯಿಂಟ್‌ ಅಂತರದಲ್ಲಿ ಮೈಸೂರಿನ ಮೈಕಾ ಕಾಲೇಜು ತಂಡವನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.