ADVERTISEMENT

ಬ್ಯಾಸ್ಕೆಟ್‌ಬಾಲ್‌: ರಾಜಮಹಲ್‌ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 15:40 IST
Last Updated 23 ನವೆಂಬರ್ 2025, 15:40 IST
<div class="paragraphs"><p>ಬ್ಯಾಸ್ಕೆಟ್‌ಬಾಲ್‌</p></div>

ಬ್ಯಾಸ್ಕೆಟ್‌ಬಾಲ್‌

   

ಬೆಂಗಳೂರು: ಆನಂದ್‌ (32 ಅಂಕ) ಹಾಗೂ ಶಿಶಿರ್‌ (22 ಅಂಕ) ಅವರ ಆಟದ ಬಲದಿಂದ, ರಾಜಮಹಲ್‌ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡವು ‘ಸ್ಟೇಟ್‌ ಅಸೋಸಿಯೇಶನ್‌ ಕಪ್‌’ಗಾಗಿ ನಡೆಯುತ್ತಿರುವ ರಾಜ್ಯ ಮಟ್ಟದ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಭಾನುವಾರ 81–63ರಿಂದ ಮೈಸೂರು ಜಿಲ್ಲೆ ಎ ತಂಡವನ್ನು ಮಣಿಸಿತು.

ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್‌ ಕೋರ್ಟ್‌ನಲ್ಲಿ ನಡೆದ ಲೀಗ್‌ ಹಂತದ ಪಂದ್ಯದಲ್ಲಿ ಮೊದಲಾರ್ಧದಲ್ಲಿ 15 ಅಂಕಗಳಿಂದ (49–34) ಮುನ್ನಡೆಯಲ್ಲಿದ್ದ ರಾಜಮಹಲ್‌ ತಂಡವು ದ್ವಿತೀಯಾರ್ಧದಲ್ಲಿಯೂ ಪ್ರಾಬಲ್ಯ ಮುಂದುವರಿಸಿತು. ನಿರಾಯಾಸವಾಗಿ ಗೆಲುವು ತನ್ನದಾಗಿಸಿಕೊಂಡಿತು.

ADVERTISEMENT

ಫಲಿತಾಂಶಗಳು: ಪುರುಷರು: ಚಿಕ್ಕಮಗಳೂರು ಜಿಲ್ಲಾ ತಂಡ 69–49ರಿಂದ ಧಾರವಾಡ ಜಿಲ್ಲೆ ಎ ತಂಡದ ವಿರುದ್ಧ; ರಾಜಮಹಲ್‌ ಬಿ.ಸಿ. ತಂಡ 81–63ರಿಂದ ಮೈಸೂರು ಜಿಲ್ಲೆ ‘ಎ’ ತಂಡದ ವಿರುದ್ಧ; ಭಾರತ್‌ ಸ್ಪೋರ್ಟ್ಸ್‌ ಯೂನಿಯನ್‌ ತಂಡ 69–38ರಿಂದ ರಾಜಕುಮಾರ್‌ ಬಿ.ಸಿ. ವಿರುದ್ಧ; ವಿಮಾನಪುರ ಸ್ಪೋರ್ಟ್ಸ್‌ ಕ್ಲಬ್‌ ತಂಡ 66–56ರಿಂದ ಎಚ್‌ಬಿಆರ್‌ ಬಿ.ಸಿ. ವಿರುದ್ಧ; ಡಿವೈಇಎಸ್‌ ಬೆಂಗಳೂರು ತಂಡ 80–41ರಿಂದ ವೈಎಂಎಂಎ ವಿರುದ್ಧ; ಎಂಎನ್‌ಕೆ ರಾವ್‌ ಪಾರ್ಕ್‌ ಬಿ.ಸಿ. ತಂಡವು 77–36ರಿಂದ ಧಾರವಾಡ ಜಿಲ್ಲೆ ‘ಬಿ’ ತಂಡದ ವಿರುದ್ಧ; ಹೂಪ್‌ 7 ಬಿ.ಸಿ. 84–68ರಿಂದ ಐಬಿಬಿಸಿ ವಿರುದ್ಧ; ವಿವೇಕ್ಸ್‌ ಸ್ಪೋರ್ಟ್ಸ್‌ ಕ್ಲಬ್‌ ತಂಡವು 95–67ರಿಂದ ಬಾಷ್‌ ತಂಡದ ವಿರುದ್ಧ ಜಯ ಗಳಿಸಿದವು.

ಮಹಿಳೆಯರು: ಸದರ್ನ್‌ ಬ್ಲ್ಯೂಸ್‌ ತಂಡ 37–15ರಿಂದ ಲಕ್ಷ್ಯನ್‌ ಬಿ.ಸಿ. ವಿರುದ್ಧ; ಮೌಂಟ್ಸ್‌ ಕ್ಲಬ್‌ ತಂಡ 56–22ರಿಂದ ಪಟ್ಟಾಭಿರಾಮ ಬಿ.ಸಿ. ವಿರುದ್ಧ; ರಾಜಮಹಲ್‌ ಬಿ.ಸಿ. ತಂಡ 49–29ರಿಂದ ಯಲಹಂಕ ನ್ಯೂ ಟೌನ್‌ ಬಿ.ಸಿ. ವಿರುದ್ಧ ಹಾಗೂ ಎಚ್‌ಬಿಆರ್‌ ಬಿ.ಸಿ. ತಂಡವು 53–38ರಿಂದ ಹಲಸೂರು ಸ್ಪೋರ್ಟ್ಸ್‌ ಯೂನಿಯನ್‌ ವಿರುದ್ಧ ಜಯ ಸಾಧಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.