ಶಾಂಘೈ: ಚೀನಾದಲ್ಲಿ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್ (ಸಿಬಿಎ) ಲೀಗ್ ಆರಂಭಗೊಂಡಿದೆ. ಕೊರೊನಾ ವೈರಾಣುವಿನ ಹಾವಳಿಯ ಹಿನ್ನೆಲೆಯಲ್ಲಿ ಐದು ತಿಂಗಳು ಸ್ಥಗಿತಗೊಂಡಿದ್ದ ಟೂರ್ನಿಗೆಶನಿವಾರ ಪ್ರೇಕ್ಷಕರಿಲ್ಲದೆ ಚಾಲನೆ ಸಿಕ್ಕಿತು.
ಇಲ್ಲಿನ ಕಿಂಗ್‌ಡಾವೊ ಕ್ರೀಡಾಂಗಣದಲ್ಲಿ ಆರಂಭಗೊಂಡ ಸಿಬಿಎ ಲೀಗ್ ಪಂದ್ಯಗಳಲ್ಲಿ ಗ್ಯಾಲರಿಗಳಲ್ಲಿ ಮೌನ ಮನೆ ಮಾಡಿತ್ತು. ವೈರಾಣು ಉಪಟಳದ ಬಳಿಕ ಚೀನಾದಲ್ಲಿ ಆರಂಭಗೊಂಡ ಮೊದಲ ಕ್ರೀಡಾ ಲೀಗ್ ಇದು.
ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಲೀಗ್ ಅನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದು ಗುಂಪು ಈಶಾನ್ಯ ಭಾಗದ ಕಿಂಗ್‌ಡಾವ್‌ದಲ್ಲಿ ಆಡುತ್ತಿದ್ದರೆ, ಇನ್ನೊಂದು ದಕ್ಷಿಣದ ನಗರ ಡಾಂಗ್‌ಗುವಾನ್‌ನಲ್ಲಿ ಕಣಕ್ಕಿಳಿಯುತ್ತಿದೆ.
ಚೀನಾದಲ್ಲಿ ಕೊರೊನಾ ವೈರಾಣು ಸೋಂಕು ಪ್ರಕರಣಗಳಲ್ಲಿ ಗಣನೀಯ ಕುಸಿತ ಕಂಡಿದ್ದರೂ, ರಾಜಧಾನಿ ಬೀಜಿಂಗ್‌ನಲ್ಲಿ ಪ್ರಕರಣಗಳ ಏರಿಕೆ ಆ ದೇಶದ ಕಳವಳಕ್ಕೆ ಕಾರಣವಾಗಿದೆ.
ಚೀನಾದಲ್ಲಿ ಶನಿವಾರ 23 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.