ADVERTISEMENT

ಬ್ಯಾಸ್ಕೆಟ್‌ಬಾಲ್: ಡಿವೈಇಎಸ್, ಬೀಗಲ್ಸ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 20:15 IST
Last Updated 6 ನವೆಂಬರ್ 2019, 20:15 IST
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಅಸೋಸಿಯೇಷನ್ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಬುಧವಾರ ವಿದ್ಯಾನಗರದ ಡಿವೈಇಎಸ್‌ ಆಟಗಾರ್ತಿ ಮಾನಸಾ ಚೆಂಡನ್ನೂ ಬ್ಯಾಸ್ಕೆಟ್‌ಗೆ ಹಾಕುವ ಪ್ರಯತ್ನ ಮಾಡಿದರು. ನ್ಯಾಷನಲ್ಸ್‌ ಮೈಸೂರಿನ ದಿಯಾ ಅವರು ಬ್ಲಾಕ್ ಮಾಡಲು ಯತ್ನಿಸಿದರು –ಪ್ರಜಾವಾಣಿ ಚಿತ್ರ
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಅಸೋಸಿಯೇಷನ್ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಬುಧವಾರ ವಿದ್ಯಾನಗರದ ಡಿವೈಇಎಸ್‌ ಆಟಗಾರ್ತಿ ಮಾನಸಾ ಚೆಂಡನ್ನೂ ಬ್ಯಾಸ್ಕೆಟ್‌ಗೆ ಹಾಕುವ ಪ್ರಯತ್ನ ಮಾಡಿದರು. ನ್ಯಾಷನಲ್ಸ್‌ ಮೈಸೂರಿನ ದಿಯಾ ಅವರು ಬ್ಲಾಕ್ ಮಾಡಲು ಯತ್ನಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಇಲ್ಲಿಯ ಡಿವೈಇಎಸ್ ಪುರುಷರ ಮತ್ತು ಬೀಗಲ್ಸ್‌ ಮಹಿಳೆಯರ ತಂಡವು ಕಂಠೀರವ ಒಳಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಅಸೋಸಿಯೇಷನ್ ಕಪ್ ಚಾಂಪಿಯನ್‌ಷಿಪ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಜಯಿಸಿದವು.

ಪುರುಷರ ವಿಭಾಗದಲ್ಲಿ ಡಿವೈಇಎಸ್‌ ತಂಡವು 65–37ರಿಂದ ಬೆಂಗಳೂರು ಸ್ಪೋರ್ಟಿಂಗ್‌ ವಿರುದ್ಧ ಜಯಿಸಿತು. ಡಿವೈಇಎಸ್‌ ತಂಡದ ರವಿ (10) ಉತ್ತಮವಾಗಿ ಆಡಿದರು. ಪಂದ್ಯದ ಮೊದಲಾರ್ಧದಲ್ಲಿ ಡಿವೈಇಎಸ್ ತಂಡವು 22–15ರಿಂದ ಮುಂದಿತ್ತು. ನಂತರದ ಅವಧಿಯಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿತು. ಸ್ಪೋರ್ಟಿಂಗ್ ಪರವಾಗಿ ಇಶಾನ್ 11 ಪಾಯಿಂಟ್ಸ್‌ ಗಳಿಸಿದರು.

ಪುರುಷರ ವಿಭಾಗದ ಇನ್ನುಳಿದ ಪಂದ್ಯಗಳಲ್ಲಿ ಬ್ಲ್ಯೂಸ್‌ ತಂಡವು 62–23ರಿಂದ ಮೈಸೂರು ಬ್ಯಾಸ್ಕೆಟ್‌ಬಾಲ್ ಕ್ಲಬ್ ವಿರುದ್ಧ ಜಯಿಸಿತು. ಬ್ಲ್ಯೂಸ್‌ನ ಬೆಂಜಮಿನ್ (13) ಮತ್ತು ಮೈಸೂರಿನ ಪೌರುಷ್ (8) ಪಾಯಿಂಟ್ ಗಳಿಸಿದರು. ಎಂ.ಇ.ಜಿ ತಂಡವು 63–12ರಿಂದ ರಾಜಕುಮಾರ್ ಬಿಸಿ ವಿರುದ್ಧ ಜಯಿಸಿತು. ಎಂ.ಇ.ಜಿಯ ಅಭಿಷೇಕ್ (23 ಅಂಕ) ಮಿಂಚಿದರು. ಮಂಗಳೂರು ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡವು 54–25ರಿಂದ ಹೊಯ್ಸಳ ಹಾಸನದ ವಿರುದ್ಧ ಗೆದ್ದಿತು. ವಿಮಾನಪುರ ತಂಡವು 56–26ರಿಂದ ಒಮೇಗಾ ಎಸ್‌ಸಿ ವಿರುದ್ಧ ಜಯಗಳಿಸಿತು.

ADVERTISEMENT

ಮಹಿಳೆಯರ ವಿಭಾಗದಲ್ಲಿ ಬೀಗಲ್ಸ್‌ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡವು 63–30ರಿಂದ ವಿಜಯಪುರದ ಡಿವೈಇಎಸ್‌ ತಂಡದ ವಿರುದ್ಧ ಗೆದ್ದರು. ಮೊದಲಾರ್ಧದಲ್ಲಿ 36–10ರಿಂದ ಮುಂದಿದ್ದ ಬೀಗಲ್ಸ್‌ ತಂಡವು ಎರಡನೇ ಅವಧಿಯಲ್ಲಿ 27 ಪಾಯಿಂಟ್ಸ್‌ ಗಳಿಸಿತು. ಇನ್ಜುಳಿದ ಪಂದ್ಯಗಳಲ್ಲಿ ಮೈಸೂರಿನ ಡಿವೈಇಎಸ್‌ 61–24 ರಿಂದ ಸಿಜೆಸಿ ವಿರುದ್ಧ; ವಿದ್ಯಾನಗರದ ಡಿವೈಇಎಸ್ 73–37ರಿಂದ ನ್ಯಾಷನಲ್ ಮೈಸೂರು ವಿರುದ್ಧ; ವಿಮಾನಪುರ 34–9ರಿಂದ ಮೈಸೂರು ಬಿಸಿ ವಿರುದ್ಧ ಮತ್ತು ಮೌಂಟ್ಸ್‌ ಕ್ಲಬ್ 60–27 ರಿಂದ ಪಟ್ಟಾಭಿರಾಮ್ ಸ್ಫೋರ್ಟ್ಸ್‌ ಕ್ಲಬ್ ವಿರುದ್ಧ ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.