ADVERTISEMENT

‘ಡಿ’ ಗುಂಪಿನಲ್ಲಿ ಭಾರತ

2021ರ ಏಷ್ಯಾಕಪ್‌ ಬ್ಯಾಸ್ಕೆಟ್‌ಬಾಲ್‌ ಅರ್ಹತಾ ಟೂರ್ನಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 20:02 IST
Last Updated 8 ಜೂನ್ 2019, 20:02 IST
ಭಾರತ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ ನರೀಂದರ್‌ ಬಾತ್ರಾ ಅವರು ಕರ್ನಾಟಕ ರಾಜ್ಯ ಒಲಿಂಪಿಕ್‌ ಸಂಸ್ಥೆಯ ಅಧ್ಯಕ್ಷ ಕೆ. ಗೋವಿಂದರಾಜ್‌ ಅವರಿಗೆ ಐಒಎ ನೆನಪಿನ ಕಾಣಿಕೆ ನೀಡಿದರು. ಪ್ರಜಾವಾಣಿ ಚಿತ್ರ– ಶ್ರೀಕಂಠ ಶರ್ಮಾ
ಭಾರತ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ ನರೀಂದರ್‌ ಬಾತ್ರಾ ಅವರು ಕರ್ನಾಟಕ ರಾಜ್ಯ ಒಲಿಂಪಿಕ್‌ ಸಂಸ್ಥೆಯ ಅಧ್ಯಕ್ಷ ಕೆ. ಗೋವಿಂದರಾಜ್‌ ಅವರಿಗೆ ಐಒಎ ನೆನಪಿನ ಕಾಣಿಕೆ ನೀಡಿದರು. ಪ್ರಜಾವಾಣಿ ಚಿತ್ರ– ಶ್ರೀಕಂಠ ಶರ್ಮಾ   

ಬೆಂಗಳೂರು: 2021ರ ಏಷ್ಯಾಕಪ್‌ ಬ್ಯಾಸ್ಕೆಟ್‌ಬಾಲ್‌ ಅರ್ಹತಾ ಟೂರ್ನಿಗೆ ಭಾರತ ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಡ್ರಾ ಪ್ರಕ್ರಿಯೆ ಶನಿವಾರ ನಗರದಲ್ಲಿ ನಡೆಯಿತು.

ಎಫ್‌ಐಬಿಎ ವಿಶ್ವ ಕ್ರಮಾಂಕದಲ್ಲಿ ಭಾರತ 67ನೇ ಸ್ಥಾನದಲ್ಲಿದೆ. ಇರಾಕ್‌ (80), ಬಹ್ರೇನ್‌(112) ಭಾರತಕ್ಕಿಂತ ಕೆಳ ಕ್ರಮಾಂಕದಲ್ಲಿದ್ದರೆ, ಲೆಬನಾನ್‌ (53) ಮೇಲಿನ ಕ್ರಮಾಂಕ ಹೊಂದಿದೆ. ಭಾರತ ತಂಡ ಟೂರ್ನಿಗೆ ಅರ್ಹತೆ ಗಳಿಸುವ ವಿಶ್ವಾಸದಲ್ಲಿದೆ.

ಟೂರ್ನಿಯ ಟ್ರೋಫಿಯನ್ನು ಎಫ್‌ಐಬಿಎ ಏಷ್ಯಾದ ಕಾರ್ಯ ಕಾರಿ ನಿರ್ದೇಶಕ ಹ್ಯಾಗಪ್‌ ಖಜಿರಿ ಯಾನ್‌ಅನಾವರಣಗೊಳಿಸಿದರು.

ADVERTISEMENT

ಗುಂಪುಗಳ ವಿಂಗಡನೆ

‘ಎ’ ಗುಂಪು: ಫಿಲಿಪೀನ್ಸ್, ಇಂಡೋನೇಷ್ಯಾ, ಥಾಯ್ಲೆಂಡ್‌, ಕೊರಿಯಾ; ‘ಬಿ’ ಗುಂಪು: ಚೈನೀಸ್‌ ತೈಪೇ, ಜಪಾನ್‌, ಮಲೇಷ್ಯಾ, ಚೀನಾ; ‘ಸಿ’ ಗುಂಪು: ಆಸ್ಟ್ರೇಲಿಯಾ, ಹಾಂಕಾಂಗ್‌, ನ್ಯೂಜಿಲೆಂಡ್, ಗುವಾಮ್‌; ‘ಡಿ’ ಗುಂಪು: ಬಹ್ರೇನ್‌, ಲೆಬನಾನ್‌, ಭಾರತ, ಇರಾಕ್‌; ‘ಇ’ ಗುಂಪು: ಸೌದಿ ಅರೇಬಿಯಾ, ಸಿರಿಯಾ, ಕತಾರ್‌, ಇರಾನ್‌; ‘ಎಫ್’ ಗುಂಪು: ಜೋರ್ಡಾನ್‌, ಕಜಕಸ್ತಾನ, ಶ್ರೀಲಂಕಾ, ಪ್ಯಾಲೆಸ್ತೀನ್‌.

2032ರ ಒಲಿಂಪಿಕ್ಸ್‌ಗೆ ಬಿಡ್‌ ಸಲ್ಲಿಸಲು ನಿರ್ಧಾರ

2032ರ ಒಲಿಂಪಿಕ್‌ ಗೇಮ್ಸ್‌ ಆಯೋಜನೆಗೆ ಬಿಡ್‌ ಸಲ್ಲಿಸುವುದು ಸೇರಿದಂತೆ ಹಲವು ಅಂತರರಾಷ್ಟ್ರೀಯ ಟೂರ್ನಿಗಳ ಆತಿಥ್ಯವನ್ನು ಭಾರತಕ್ಕೆ ತರುವ ಪ್ರಯತ್ನ ಜಾರಿಯಲ್ಲಿದೆ ಎಂದು ಭಾರತೀಯ ಒಲಿಂಪಿಕ್‌ ಸಂಸ್ಥೆಯ ಅಧ್ಯಕ್ಷ ನರೀಂದರ್‌ ಬಾತ್ರಾ ಹೇಳಿದರು. 2025ಕ್ಕೆ ಬಿಡ್‌ ಪ್ರಕ್ರಿಯೆ ಆರಂಭವಾಗುತ್ತಿದ್ದು ಕಳೆದ ವರ್ಷವೇ ನಮ್ಮ ಆಸಕ್ತಿಯನ್ನು ತಿಳಿಸಿದ್ದೇವೆ ಎಂದು ಕರ್ನಾಟಕ ಒಲಿಂಪಿಕ್‌ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

2026ರ ಯೂತ್‌ ಒಲಿಂಪಿಕ್‌ ಗೇಮ್ಸ್‌, 2030ರ ಏಷ್ಯನ್‌ ಗೇಮ್ಸ್‌ ಆಯೋಜಿಸಲು ಆಸಕ್ತರಾಗಿರುವುದಾಗಿ ಬಾತ್ರಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.