
ಚೆಸ್
ಬೆಂಗಳೂರು: ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ವತಿಯಿಂದ ನಡೆದ ಬೆಂಗಳೂರು ನಗರ ಜಿಲ್ಲಾ ಮಟ್ಟದ 15 ವರ್ಷದೊಳಗಿನವರ ಚೆಸ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ ಲೇಕ್ ಮಾಂಟ್‌ಫೋರ್ಟ್ ಶಾಲೆಯ ವೆಂಕಟನಾಗ ಕಾರ್ತಿಕ್ ಮಲ್ಲಾದಿ (ರೇಟಿಂಗ್: 1834) ಎಂಟು ಸುತ್ತುಗಳಿಂದ ಸಂಭವನೀಯ ಎಂಟು ಅಂಕ ಗಳಿಸಿ ಚಾಂಪಿಯನ್ ಪಟ್ಟ ಪಡೆದರು.
ಯುನೈಟೆಡ್ ವರ್ಲ್ಡ್ ಅಕಾಡೆಮಿ ಮತ್ತು ಬೆಂಗಳೂರು ನಗರ ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಈ ಟೂರ್ನಿ ಭಾನುವಾರ ಮುಕ್ತಾಯಗೊಂಡಿತು. ನ್ಯೂ ಹೊರೈಝನ್ ಗುರುಕುಲದ ಆರ್ಣವ್ ಮಂಚೆ (1856) ಒಟ್ಟು 7 ಅಂಕ ಸಂಗ್ರಹಿಸಿ ಬೆಳ್ಳಿ ಗೆದ್ದರು.
ಬಾಲಕಿಯರ ವಿಭಾಗದಲ್ಲಿ ಇಂದುಶೀತಲಾ ಎನ್. (ರೇಟಿಂಗ್: 1679) ಆರು ಸುತ್ತುಗಳಿಂದ ಐದು ಅಂಕ ಗಳಿಸಿ ಮೊದಲಿಗರಾದರು. ಕೃಪಾ ಎಸ್.ಉಕ್ಕಲಿ (1861) ಇಷ್ಟೇ ಅಂಕ ಗಳಿಸಿದರೂ, ಕಡಿಮೆ ಟೈಬ್ರೇಕರ್‌ನಿಂದಾಗಿ ಎರಡನೇ ಸ್ಥಾನ ಗಳಿಸಿದರು.
ಏಳು ವರ್ಷದೊಳಗಿನವರ ಬಾಲಕಿಯರ ವಿಭಾಗದಲ್ಲಿ ಯುಕೆಜಿ ವಿದ್ಯಾರ್ಥಿನಿ ರಿಹಾನ್ಶಿ ಮುನಾಗಲ (5/5) ಮೊದಲ ಸ್ಥಾನ ಮತ್ತು ಸಾಯಿ ರಕ್ಷಾ (4/5) ಎರಡನೇ ಸ್ಥಾನ ಪಡೆದಳು.
ಬಾಲಕರ ವಿಭಾಗದಲ್ಲಿ ಸಾತ್ವಿಕ್ ಆರ್.ಭಟ್ (7/7) ಅಜೇಯ ಸಾಧನೆಯೊಡನೆ ಚಿನ್ನ ಮತ್ತು ಸಾಯಿಷ್ಣು ಸೂರ್ಯ ಸಿ. (6/7) ಎರಡನೇ ಬೆಳ್ಳಿ ಗೆದ್ದನು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.