ADVERTISEMENT

ಕಬಡ್ಡಿ: ಬೆಂಗಳೂರು ಕೆವಿಎಸ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 23:46 IST
Last Updated 4 ಆಗಸ್ಟ್ 2025, 23:46 IST
ಬೆಂಗಳೂರು ತಂಡದ ಅಕ್ಷಿತಾ ಅವರು ಚಂಡೀಗಢ ತಂಡದ ಆಟಗಾರ್ತಿಯರಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು          ಚಿತ್ರ: ಕೃಷ್ಣ ಕುಮಾರ್ ಪಿ.ಎಸ್.

ಕೇಂದ್ರಿಯ ವಿದ್ಯಾಲಯಗಳ ಬೆಂಗಳೂರು ವಲಯದ ಬಾಲಕಿಯರ ತಂಡವು ಇಲ್ಲಿ ನಡೆಯುತ್ತಿರುವ ಕೇಂದ್ರಿಯ ವಿದ್ಯಾಲಯಗಳ ರಾಷ್ಟ್ರೀಯ ಕ್ರೀಡಾಕೂಟದ 14 ವರ್ಷದೊಳಗಿನವರ ವಿಭಾಗದಲ್ಲಿ ಚಂಡೀಗಢ ತಂಡದ ಎದುರು ಗೆಲುವು ಸಾಧಿಸಿತು.
ಬೆಂಗಳೂರು ತಂಡದ ಅಕ್ಷಿತಾ ಅವರು ಚಂಡೀಗಢ ತಂಡದ ಆಟಗಾರ್ತಿಯರಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು          ಚಿತ್ರ: ಕೃಷ್ಣ ಕುಮಾರ್ ಪಿ.ಎಸ್. ಕೇಂದ್ರಿಯ ವಿದ್ಯಾಲಯಗಳ ಬೆಂಗಳೂರು ವಲಯದ ಬಾಲಕಿಯರ ತಂಡವು ಇಲ್ಲಿ ನಡೆಯುತ್ತಿರುವ ಕೇಂದ್ರಿಯ ವಿದ್ಯಾಲಯಗಳ ರಾಷ್ಟ್ರೀಯ ಕ್ರೀಡಾಕೂಟದ 14 ವರ್ಷದೊಳಗಿನವರ ವಿಭಾಗದಲ್ಲಿ ಚಂಡೀಗಢ ತಂಡದ ಎದುರು ಗೆಲುವು ಸಾಧಿಸಿತು.   

ಬೆಂಗಳೂರು: ಕೇಂದ್ರಿಯ ವಿದ್ಯಾಲಯಗಳ ಬೆಂಗಳೂರು ವಲಯದ ಬಾಲಕಿಯರ ತಂಡವು ಇಲ್ಲಿ ನಡೆಯುತ್ತಿರುವ ಕೇಂದ್ರಿಯ ವಿದ್ಯಾಲಯಗಳ ರಾಷ್ಟ್ರೀಯ ಕ್ರೀಡಾಕೂಟದ 14 ವರ್ಷದೊಳಗಿನವರ ವಿಭಾಗದಲ್ಲಿ ಚಂಡೀಗಢ ತಂಡದ ಎದುರು ಗೆಲುವು ಸಾಧಿಸಿತು.

ಹೆಬ್ಬಾಳದಲ್ಲಿರುವ ಕೇಂದ್ರಿಯ ವಿದ್ಯಾಲಯದ ಮೈದಾನದಲ್ಲಿ ಸೋಮವಾರ ನಡೆದ ಲೀಗ್‌ ಪಂದ್ಯದಲ್ಲಿ ಆತಿಥೇಯ ತಂಡವು 28–24ರಿಂದ ಚಂಡೀಗಢ ತಂಡವನ್ನು ಮಣಿಸಿತು. ಈ ಗೆಲುವಿನೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿರುವ ಬೆಂಗಳೂರು ವಲಯವು ಕ್ವಾರ್ಟರ್‌ ಫೈನಲ್‌ ತಲುಪುವತ್ತ ಮುನ್ನಡೆದಿದೆ.

ಮಂಗಳವಾರ ನಡೆಯಲಿರುವ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಬೆಂಗಳೂರು ತಂಡವು ಗುವಾಹಟಿ ತಂಡವನ್ನು ಎದುರಿಸಲಿದೆ.

ADVERTISEMENT

ಫಲಿತಾಂಶಗಳು: ಜೈಪುರ 26–18ರಿಂದ ಮುಂಬೈ ವಿರುದ್ಧ; ದೆಹಲಿ32–19ರಿಂದ ಹೈದರಾಬಾದ್ ವಿರುದ್ಧ; ಪಟ್ನಾ 27–14ರಿಂದ ಅಹಮದಾಬಾದ್‌ ವಿರುದ್ದ; ಗುವಾಹಟಿ 28–19ರಿಂದ ಚಂಡೀಗಢ ವಿರುದ್ದ; ಜಬಲ್‌ಪುರ28–19ರಿಂದ ಹೈದರಾಬಾದ್ ವಿರುದ್ದ; ಚೆನ್ನೈ 34–05ರಿಂದ ವಾರಾಣಸಿ ವಿರುದ್ದ; ಆಗ್ರಾ 40–18ರಿಂದ ಎರ್ನಾಕುಳಂ ವಿರುದ್ದ; ಜೈಪುರ 20–17ರಿಂದ ಭೋಪಾಲ್‌ ವಿರುದ್ದ; ಡೆಹ್ರಾಡೂನ್‌ 22–19ರಿಂದ ಭುವನೇಶ್ವರ ವಿರುದ್ದ; ಕೋಲ್ಕತ್ತ31–14ರಿಂದ ಅಹಮದಾಬಾದ್‌ ವಿರುದ್ದ; ರಾಂಚಿ29–02ರಿಂದ ಎರ್ನಾಕುಳಂ ವಿರುದ್ದ; ಎರ್ನಾಕುಳಂ30–26ರಿಂದ ಗುವಾಹಟಿ ವಿರುದ್ದ; ರಾಂಚಿ28–17ರಿಂದ ಆಗ್ರಾ ವಿರುದ್ದ ಜಯ ಸಾಧಿಸಿದವು. ಜಮ್ಮು ಹಾಗೂ ಲಖನೌ ನಡುವಣ ಪಂದ್ಯವು 23–23ರಿಂದ ಡ್ರಾ ಆಯಿತು.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.