ADVERTISEMENT

ಗಾಲ್ಫ್‌: ರೋಹನಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 19:22 IST
Last Updated 9 ಡಿಸೆಂಬರ್ 2018, 19:22 IST
ಪ್ರಶಸ್ತಿಯೊಂದಿಗೆ ಅನುರ ರೋಹನಾ –ಪ್ರಜಾವಾಣಿ ಚಿತ್ರ
ಪ್ರಶಸ್ತಿಯೊಂದಿಗೆ ಅನುರ ರೋಹನಾ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಶ್ರೀಲಂಕಾದ ಅನುರ ರೋಹನಾ ಅವರು ಪಿಜಿಟಿಐ ಬೆಂಗಳೂರು ಓಪನ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಕರ್ನಾಟಕ ಗಾಲ್ಫ್‌ ಸಂಸ್ಥೆಯಲ್ಲಿ ಭಾನುವಾರ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ 45 ವರ್ಷ ವಯಸ್ಸಿನ ರೋಹನಾ ಉತ್ತಮ ಸಾಮರ್ಥ್ಯ ತೋರಿದರು. ಈ ಮೂಲಕ ಒಟ್ಟು 269 ಸ್ಕೋರ್‌ ಕಲೆಹಾಕಿ ಚಾಂಪಿಯನ್ ಆದರು. ವೃತ್ತಿಪರ ಗಾಲ್ಫ್‌ನಲ್ಲಿ ಅವರು ಜಯಿಸಿದ ಆರನೇ ಟ್ರೋಫಿ ಇದಾಗಿದೆ.

ಪಟ್ನಾದ ಅಮನ್‌ ರಾಜ್‌ ರನ್ನರ್‌ ಅಪ್‌ ಆದರು. ಅವರು ಒಟ್ಟು 272 ಸ್ಕೋರ್‌ ಗಳಿಸಿದರು. ಆದಿಲ್‌ ಬೇಡಿ (273) ಮೂರನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.