ಹೈದರಾಬಾದ್: ಬೆಂಗಳೂರು ಟಾರ್ಪಿಡೋಸ್ ತಂಡ ಗೆಲುವಿನ ಓಟವನ್ನು ಮುಂದುವರಿಸಿದ್ದು, ಪ್ರೈಮ್ ವಾಲಿಬಾಲ್‌ಲೀಗ್‌ನಲ್ಲಿ ಸೋಮವಾರ ಚೆನ್ನೈ ಬ್ಲಿಟ್ಝ್ ತಂಡವನ್ನು 3–1 ಸೆಟ್‌ಗಳಿಂದ ಸೋಲಿಸಿತು.
ಟಾರ್ಪಿಡೋಸ್ ತಂಡವು 17–15, 14–16, 17–15, 16–14 ರಿಂದ ಸೋಲಿಸಿ ಹಾಲಿ ಲೀಗ್‌ನಲ್ಲಿ ಸತತ ನಾಲ್ಕನೇ ಗೆಲುವನ್ನು ದಾಖಲಿಸಿತು. ದಾಳಿ ವಿಭಾಗದಲ್ಲಿ ಮಿಂಚಿದ ಜೋಯೆಲ್ ಬೆಂಜಮಿನ್ ‘ಪಂದ್ಯದ ಆಟಗಾರ’ ಗೌರವ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.