ADVERTISEMENT

ಹಾಕಿ: ಸೋಲು ತಪ್ಪಿಸಿದ ಚಿನ್ನಪ್ಪ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 18:06 IST
Last Updated 9 ಜನವರಿ 2020, 18:06 IST
ನೈರುತ್ಯ ರೈಲ್ವೆ ತಂಡದ ಸಂಜೀವ್‌ (ಎಡ) ಚೆಂಡನ್ನು ಗುರಿ ಮುಟ್ಟಿಸಲು ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ
ನೈರುತ್ಯ ರೈಲ್ವೆ ತಂಡದ ಸಂಜೀವ್‌ (ಎಡ) ಚೆಂಡನ್ನು ಗುರಿ ಮುಟ್ಟಿಸಲು ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮೂರನೇ ಕ್ವಾರ್ಟರ್‌ನಲ್ಲಿ ಗೋಲುಹೊಡೆದ ಚೇತನ್‌ ಚಿನ್ನಪ್ಪ, ಕೂರ್ಗ್‌ ಹಾಕಿ ಸಂಸ್ಥೆಗೆ ಆಪತ್ಬಾಂಧವರಾದರು.

ಚಿನ್ನಪ್ಪ ಅವರ ಕೈಚಳಕದಿಂದಾಗಿ ಕೂರ್ಗ್‌ ತಂಡ ಬಿಎಚ್‌ಎ ‘ಎ’ ಡಿವಿಷನ್‌ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಹುಬ್ಬಳ್ಳಿಯ ನೈರುತ್ವ ರೈಲ್ವೆ ತಂಡದ ಎದುರಿನ ಪಂದ್ಯದಲ್ಲಿ 1–1 ಗೋಲುಗಳಿಂದ ಡ್ರಾ ಸಾಧಿಸಿತು.

ಶಾಂತಿನಗರದಲ್ಲಿರುವ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ (ಕೆಎಸ್‌ಎಚ್‌ಎ) ಮೈದಾನದಲ್ಲಿ ಗುರುವಾರ ನಡೆದ ಹಣಾಹಣಿಯಲ್ಲಿ ಸಂಜೀವ್‌ ಅವರು ನೈರುತ್ವ ರೈಲ್ವೆ ತಂಡದ ಖಾತೆ ತೆರೆದರು. ಅವರು 16ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.

ADVERTISEMENT

ವಿರಾಮದ ನಂತರ ಕೂರ್ಗ್‌ ತಂಡ ವೇಗದ ಆಟಕ್ಕೆ ಅಣಿಯಾಯಿತು. ಈ ತಂಡದ ಚೇತನ್‌ 35ನೇ ನಿಮಿಷದಲ್ಲಿ ಗೋಲು ಬಾರಿಸಿ ಸಮಬಲಕ್ಕೆ ಕಾರಣರಾದರು. ನಂತರದ ಅವಧಿಯಲ್ಲಿ ಎರಡು ತಂಡಗಳೂ ಜಿದ್ದಾಜಿದ್ದಿನಿಂದ ಸೆಣಸಿದವು. ಹೀಗಿದ್ದರೂ ಯಾರಿಗೂ ಗೆಲುವಿನ ಗೋಲು ದಾಖಲಿಸಲು ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.