ADVERTISEMENT

ರಾಷ್ಟ್ರೀಯ ಚೆಸ್‌: ಭಕ್ತಿ ಕುಲಕರ್ಣಿಗೆ ಪ್ರಶಸ್ತಿ

ರಾಷ್ಟ್ರೀಯ ಚೆಸ್‌ ಚಾಂಪಿಯನ್‌ಷಿಪ್‌: ವಂತಿಕಾ ಅಗರ್ವಾಲ್‌ ರನ್ನರ್‌ಅಪ್‌

ಪಿಟಿಐ
Published 27 ಜುಲೈ 2019, 18:37 IST
Last Updated 27 ಜುಲೈ 2019, 18:37 IST

ಕಾರೈಕುಡಿ, ತಮಿಳುನಾಡು: ಹಾಲಿ ಚಾಂಪಿಯನ್‌ ಏರ್‌ ಇಂಡಿಯಾದ ಭಕ್ತಿ ಕುಲಕರ್ಣಿ ಅವರು ರಾಷ್ಟ್ರೀಯ ಚೆಸ್‌ ಚಾಂಪಿಯನ್‌ಷಿಪ್‌ ಪ್ರಶಸ್ತಿ ಉಳಿಸಿಕೊಂಡಿದ್ದಾರೆ. ಶನಿವಾರ ಮುಕ್ತಾ ಯವಾದ 46ನೇ ಚಾಂಪಿಯನ್‌ಷಿಪ್‌
ನಲ್ಲಿ 11 ಸುತ್ತುಗಳಲ್ಲಿ 10 ಪಾಯಿಂಟ್‌ ಗಳಿಸಿದ ಅವರು ಕಿರೀಟ ಧರಿಸಿದರು.

ಅಂತಿಮ ಸುತ್ತಿನಲ್ಲಿ ಅಂತರರಾಷ್ಟ್ರೀಯ ಗ್ರ್ಯಾಂಡ್‌ಮಾಸ್ಟರ್‌ ಆಂಧ್ರ ಪ್ರದೇಶದ ಪ್ರತ್ಯುಷಾ ಬೊಡ್ಡಾ ಅವರನ್ನು ಎದುರಿಸಿದ್ದ ಭಕ್ತಿ, ಡ್ರಾ ಸಾಧಿಸಿದರು. ಪಂದ್ಯದ ಆರಂಭದಲ್ಲಿ ದೊರೆತ ಉತ್ತಮ ಅವಕಾಶಗಳನ್ನು ಪ್ರತ್ಯುಷಾ ಕೈಚೆಲ್ಲಿದರು. 62 ನಡೆಗಳ ಬಳಿಕ ಇಬ್ಬರೂ ಡ್ರಾಗೆ ಸಮ್ಮತಿಸಿದರು. ಪ್ರಶಸ್ತಿ ಗೆದ್ದ ಭಕ್ತಿ ಅವರು ₹ 4 ಲಕ್ಷ ಬಹುಮಾನ ಮೊತ್ತ ತಮ್ಮದಾಗಿಸಿಕೊಂಡರು. 8.5 ಪಾಯಿಂಟ್‌ ಗಳಿಸಿದ ದಿಲ್ಲಿಯ ವಂತಿಕಾ ಅಗರ್ವಾಲ್‌ ಮೊದಲ ರನ್ನರ್‌ಅಪ್‌ ಆದರೆ, ಮಹಾರಾಷ್ಟ್ರದ ದಿವ್ಯಾ ದೇಶಮುಖ್‌ ಅಷ್ಟೇ ಪಾಯಿಂಟ್‌ ಗಳಿಸಿದರೂ ಟೈಬ್ರೇಕ್‌ ಸ್ಕೋರ್‌ ಆಧಾರದಲ್ಲಿ ಎರಡನೇ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT