ADVERTISEMENT

ಜೂನಿಯರ್ ಬಾಕ್ಸಿಂಗ್: ಸೆಮಿಫೈನಲ್‌ಗೆ ವಿಶ್ವಾಮಿತ್ರ ಚೋಂಗ್‌ಥಮ್

ಏಷ್ಯನ್ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್: ನಾಲ್ಕರ ಘಟ್ಟಕ್ಕೆ ನಾಲ್ವರು

ಪಿಟಿಐ
Published 22 ಆಗಸ್ಟ್ 2021, 11:10 IST
Last Updated 22 ಆಗಸ್ಟ್ 2021, 11:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿಶ್ವಾಮಿತ್ರ ಚೋಂಗ್‌ಥಮ್ (51 ಕೆಜಿ ವಿಭಾಗ) ಸೇರಿದಂತೆ ಭಾರತದ ನಾಲ್ವರು ಬಾಕ್ಸರ್‌ಗಳು ಏಷ್ಯನ್ ಯೂತ್ ಮತ್ತು ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇದರೊಂದಿಗೆ ದುಬೈನಲ್ಲಿ ನಡೆಯುತ್ತಿರುವ ಕೂಟದಲ್ಲಿ ಕನಿಷ್ಠ ಕಂಚಿನ ಪದಕಗಳನ್ನು ಖಚಿತಪಡಿಸಿದ್ದಾರೆ.

ವಿಶ್ವ ಯೂತ್ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತ ವಿಶ್ವಾಮಿತ್ರ ಅವರು 5–0ಯಿಂದ ಕಜಕಸ್ತಾನದ ಕೆಂಜೆ ಮುರಾತಲ್‌ ಎದುರು ಗೆದ್ದು ನಾಲ್ಕರ ಘಟ್ಟ ತಲುಪಿದರು.

ಅಭಿಮನ್ಯು ಲೌರಾ (92 ಕೆಜಿ), ದೀಪಕ್‌ (75 ಕೆಜಿ) ಹಾಗೂ ಪ್ರೀತಿ (ಮಹಿಳೆಯರ 57 ಕೆಜಿ ವಿಭಾಗ) ಸೆಮಿಫೈನಲ್‌ಗೆ ತಲುಪಿದ ಇನ್ನುಳಿದ ಮೂವರು.

ADVERTISEMENT

ಮಿಡ್ಲ್‌ವೇಟ್‌ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ದೀಪಕ್‌ ಇರಾಕ್‌ನ ಧುರ್‌ಗಮ್‌ ಕರೀಂ ಎದುರು ಜಯ ಸಾಧಿಸಿದರು.

ರಾಷ್ಟ್ರೀಯ ಚಾಂಪಿಯನ್‌ ಆಗಿರುವ ಹರಿಯಾಣದ ಅಭಿಮನ್ಯು ಅವರು ಎಂಟರಘಟ್ಟದ ಹಣಾಹಣಿಯಲ್ಲಿ ಕಿರ್ಗಿಸ್ತಾನದ ತೆನಿಬೆಕೊವ್‌ ಸಂಜಾರ್ ಅವರನ್ನು ಪರಾಭವಗೊಳಿಸಿದರು. ಪ್ರೀತಿ ಅವರು ಮಂಗೋಲಿಯಾದ ತಗ್ಸ್‌ಜಾರ್ಗಲ್‌ ನೊಮಿನ್‌ ಎದುರು ಗೆದ್ದು ನಾಲ್ಕರ ಘಟ್ಟಕ್ಕೆ ಸ್ಥಾನ ಖಚಿತಪಡಿಸಿಕೊಂಡರು.

86 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಆದಿತ್ಯ ಜಾಂಗು ಅವರು ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಕಜಕಸ್ತಾನದ ತೆಮ್ರಲಾನ್‌ ಎದುರು ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.