ADVERTISEMENT

ಮಿಯಾಮಿ ಓಪನ್ ಟೆನಿಸ್‌ ಟೂರ್ನಿ: ಎಂಟರಘಟ್ಟಕ್ಕೆ ಬೋಪಣ್ಣ– ಶಪವಲೊವ್‌

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 13:25 IST
Last Updated 28 ಮಾರ್ಚ್ 2022, 13:25 IST
ಡೆನಿಸ್‌ ಶಪವಲೊವ್ ಮತ್ತು ರೋಹನ್ ಬೋಪಣ್ಣ – ಟ್ವಿಟರ್‌ ಚಿತ್ರ
ಡೆನಿಸ್‌ ಶಪವಲೊವ್ ಮತ್ತು ರೋಹನ್ ಬೋಪಣ್ಣ – ಟ್ವಿಟರ್‌ ಚಿತ್ರ   

ಮಿಯಾಮಿ: ಭಾರತದ ರೋಹನ್‌ ಬೋಪಣ್ಣ ಮತ್ತು ಕೆನಡಾದ ಡೆನಿಸ್‌ ಶಪವಲೊವ್ ಜೋಡಿಯು ಅಗ್ರಶ್ರೇಯಾಂಕದ ಕ್ರೊವೇಷ್ಯಾ ಆಟಗಾರರಿಗೆ ಆಘಾತ ನೀಡಿ ಮಿಯಾಮಿ ಓಪನ್ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದೆ.

ಭಾನುವಾರ ರಾತ್ರಿ ನಡೆದ ಪುರುಷರ ಡಬಲ್ಸ್‌ ಪ್ರೀಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಶ್ರೇಯಾಂಕರಹಿತ ಆಟಗಾರರಾದ ಬೋಪಣ್ಣ– ಶಪೊವಲೊವ್ ಅವರಿಗೆ6-3, 7-6(3)ರಿಂದ ನಿಕೊಲಾ ಮೆಕ್ಟಿಕ್‌ ಮತ್ತು ಮೇಟ್‌ ಪಾವಿಚ್‌ ಅವರಿಗೆ ಸೋಲುಣಿಸಿದರು.

ಮೊದಲ ಸುತ್ತಿನ ಹೋರಾಟದ ಪಂದ್ಯದಲ್ಲಿ ಭಾರತ–ಕೆನಡಾ ಜೋಡಿ6-7(5), 6-2, 10-3ರಿಂದ ಎಲ್‌ ಸೆಲ್ವಡೊರ್‌ನ ಮಾರ್ಸೆಲೊವಾ ಅವ್ರೆವಾಲೊ ಮತ್ತುನೆದರ್ಲೆಂಡ್ಸ್‌ನ ಜೀನ್ ಜೂಲಿಯನ್‌ ರೋಜರ್ ಎದುರು ಗೆದ್ದಿದ್ದರು.

ADVERTISEMENT

ಎಂಟರಘಟ್ಟದ ಪಂದ್ಯದಲ್ಲಿ ಬೋಪಣ್ಣ ಮತ್ತು ಶಪೊವಲೊವ್ ಅವರಿಗೆ ಆರನೇ ಶ್ರೇಯಾಂಕದ, ನೆದರ್ಲೆಂಡ್ಸ್‌ನ ವೇಸ್ಲಿ ಕೂಲ್‌ಹೊಫ್‌ ಮತ್ತು ಗ್ರೇಟ್‌ ಬ್ರಿಟನ್‌ನ ನೀಲ್‌ ಸ್ಕುಪ್ಸ್‌ಕಿ ಸವಾಲು ಎದುರಾಗಿದೆ. ಎರಡನೇ ಸುತ್ತಿನಸೆಣಸಾಟದಲ್ಲಿ ವೇಸ್ಲಿ– ನೀಲ್‌6-3, 7-6(8)ರಿಂದ ಇಟಲಿಯ ಪೆಡ್ರೊ ಮಾರ್ಟಿನೆಜ್‌ ಮತ್ತು ಲೊರೆಂಜೊ ಸೊನೆಗೊ ಅವರನ್ನು ಮಣಿಸಿದರು.

‘ತೀವ್ರ ಒತ್ತಡ‘;ಹಿಂದೆ ಸರಿದ ಅಜರೆಂಕಾ: ‘ಕಳೆದ ಕೆಲವು ವಾರಗಳಿಂದ ತಾನು ತೀವ್ರ ಒತ್ತಡದಲ್ಲಿದ್ದು, ಮಿಯಾಮಿ ಓಪನ್ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿಬೆಲಾರೂಸ್ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ಹೇಳಿದ್ದಾರೆ.

ಇದರಿಂದಾಗಿ ಮಹಿಳಾ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಅವರ ವಿರುದ್ಧ ಕಣಕ್ಕಿಳಿದಿದ್ದ ಜೆಕ್ ಗಣರಾಜ್ಯದ ಆಟಗಾರ್ತಿ ಲಿಂಡಾ ಫ್ರುವ್ಹಿರ್ತೊವಾ ಅವರಿಗೆ ವಾಕ್‌ಓವರ್ ಸಿಕ್ಕಿತು.

32 ವರ್ಷದ ಅಜರೆಂಕಾ ಹಿಂದೆ ಸರಿದ ವೇಳೆ ಜೆಕ್ ಆಟಗಾರ್ತಿ ಪಂದ್ಯದಲ್ಲಿ 6–2, 3–0ರಿಂದ ಮುಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.