ADVERTISEMENT

ಬಾಕ್ಸಿಂಗ್‌: ಫೈನಲ್‌ಗೆ ಪಂಘಾಲ್, ನೀತು

ಪಿಟಿಐ
Published 6 ಆಗಸ್ಟ್ 2022, 12:36 IST
Last Updated 6 ಆಗಸ್ಟ್ 2022, 12:36 IST
ಎದುರಾಳಿಗೆ ಪಂಚ್‌ ನೀಡಿದ ಅಮಿತ್ ಪಂಘಾಲ್‌– ಪಿಟಿಐ ಚಿತ್ರ
ಎದುರಾಳಿಗೆ ಪಂಚ್‌ ನೀಡಿದ ಅಮಿತ್ ಪಂಘಾಲ್‌– ಪಿಟಿಐ ಚಿತ್ರ   

ಬರ್ಮಿಂಗ್‌ಹ್ಯಾಮ್‌: ಅದ್ಭುತ ಸಾಮರ್ಥ್ಯ ತೋರಿದ ಅಮಿತ್‌ ಪಂಫಾಲ್‌ ಹಾಗೂ ನೀತು ಗಂಗಾಸ್‌ ಕಾಮನ್‌ವೆಲ್ತ್ ಕ್ರೀಡಾಕೂಟದ ಬಾಕ್ಸಿಂಗ್ ಸ್ಪರ್ಧೆಗಳ ಫೈನಲ್‌ಗೆ ತಲುಪಿದ್ದಾರೆ.

ಪುರುಷರ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಅಮಿತ್‌, ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಳೆದ ಆವೃತ್ತಿಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಈ ಬಾರಿ ಚಿನ್ನ ಗೆಲ್ಲುವ ಕಾತರದಲ್ಲಿದ್ದಾರೆ. ಶುಕ್ರವಾರ ನಡೆದ ನಾಲ್ಕರ ಘಟ್ಟದ ಬೌಟ್‌ನಲ್ಲಿ ಅವರು 5–0ಯಿಂದ ಜಾಂಬಿಯಾದ ಪ್ಯಾಟ್ರಿಕ್ ಚಿನೆಂಬಾ ಅವರನ್ನು ಪರಾಭವಗೊಳಿಸಿದರು.

ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರೂ ಛಲಬಿಡದ ಅಮಿತ್‌, ಅಪಾರ ಅನುಭವವನ್ನು ಪಣಕ್ಕಿಟ್ಟು ಜಯಭೇರಿ ಮೊಳಗಿಸಿದರು.

ADVERTISEMENT

ನೀತು ಅವರು ಮಹಿಳೆಯರ 48 ಕೆಜಿ ವಿಭಾಗದ ಹಣಾಹಣಿಯಲ್ಲಿ ಆರ್‌ಎಸ್‌ಸಿ (ರೆಫರಿಯಿಂದ ಸ್ಪರ್ಧೆ ಸ್ಥಗಿತ) ಆಧಾರದ ಮೇಲೆ ಕೆನಡಾದ ಪ್ರಿಯಾಂಕಾ ದಿಲ್ಲೋನ್ ಅವರನ್ನು ಪರಾಭವಗೊಳಿಸಿದರು. 21 ವರ್ಷದ ನೀತು ಅವರು ಎದುರಾಳಿಯನ್ನು ಪರಿಣಾಮಕಾರಿ ಪಂಚ್‌ಗಳಿಂದ ಕಂಗೆಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.