ADVERTISEMENT

ಬಾಕ್ಸಿಂಗ್‌: ಫೈನಲ್‌ಗೆ ಗೌರವ್‌

ಪಿಟಿಐ
Published 1 ನವೆಂಬರ್ 2018, 18:23 IST
Last Updated 1 ನವೆಂಬರ್ 2018, 18:23 IST

ಪುಣೆ: ಗೌರವ್ ಬಿಧೂರಿ, ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಫೈನಲ್‌ಗೆ ಪ್ರವೇಶಿಸಿದರು. ರೈಲ್ವೆಯನ್ನು ಪ್ರತಿನಿಧಿಸುತ್ತಿರುವ ಗೌರವ್‌ ಗುರುವಾರ ನಡೆದ 56 ಕೆಜಿ ವಿಭಾಗದ ಬೌಟ್‌ನಲ್ಲಿ ತಮಿಳುನಾಡಿನ ಆರ್‌.ಮದನ್ ಅವರನ್ನು 5–0ಯಿಂದ ಮಣಿಸಿದರು. 52 ಕೆಜಿ ವಿಭಾಗದಲ್ಲಿ ಸಚಿನ್ ಸಿವಾಚ್‌ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಕಾಮನ್‌ವೆಲ್ತ್ ಕೂಟದಲ್ಲಿ ಬೆಳ್ಳಿ ಗೆದ್ದಿದ್ದ ಮನೀಷ್‌ ಕೌಶಿಕ್‌ 60 ಕೆಜಿ ವಿಭಾಗದಲ್ಲಿ ತಮಿಳುನಾಡಿನ ಮೂವೇಂದ್ರನ್ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದರು. ಪ್ರತಿಸ್ಪರ್ಧಿ ಆಂಧ್ರದ ಶ್ರೀನಿವಾಸ ಹಿಂಜರಿದ ಕಾರಣ ರೋಹಿತ್ ಟೊಕಾಸ್ (64 ಕೆಜಿ) ಫೈನಲ್‌ಗೆ ಲಗ್ಗೆ ಇಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT