ADVERTISEMENT

ಸ್ಟ್ರಾಂಡ್‌ಜಾ ಸ್ಮಾರಕ ಬಾಕ್ಸಿಂಗ್ ಟೂರ್ನಿ: ಸುಮಿತ್ ಕುಂದು ಶುಭಾರಂಭ

ಮೂವರು ಭಾರತೀಯರಿಗೆ ಸೋಲು

ಪಿಟಿಐ
Published 21 ಫೆಬ್ರುವರಿ 2022, 13:09 IST
Last Updated 21 ಫೆಬ್ರುವರಿ 2022, 13:09 IST
ಸುಮಿತ್ ಕುಂದು– ಟ್ವಿಟರ್ ಚಿತ್ರ
ಸುಮಿತ್ ಕುಂದು– ಟ್ವಿಟರ್ ಚಿತ್ರ   

ನವದೆಹಲಿ: ಭಾರತದ ಸುಮಿತ್ ಕುಂದು ಅವರು ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತ, ರಷ್ಯಾದ ದಂಬುಲಾಟ್‌ ಬಿಜಮೊವ್ ಅವರಿಗೆ ಆಘಾತ ನೀಡಿ ಸ್ಟ್ರಾಂಡ್‌ಜಾ ಸ್ಮಾರಕ ಬಾಕ್ಸಿಂಗ್ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿದರು. ಆದರೆ ದೇಶದ ಮೂವರು ಬಾಕ್ಸರ್‌ಗಳು ಮೊದಲ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು.

ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ಟೂರ್ನಿಯ ನಡೆಯುತ್ತಿದೆ‌. ಸೀನಿಯರ್‌ ವಿಭಾಗದಲ್ಲಿ ಕೇವಲ ಎರಡನೇ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಸ್ಪರ್ಧಿಸುತ್ತಿರುವ ಹಾಲಿ ರಾಷ್ಟ್ರೀಯ ಚಾಂಪಿಯನ್‌ ಸುಮಿತ್ 75 ಕೆಜಿ ವಿಭಾಗದಲ್ಲಿ 5–0ಯಿಂದ ಎದುರಾಳಿಯನ್ನು ಚಿತ್ ಮಾಡಿದರು. ಎರಡನೇ ಸುತ್ತಿನಲ್ಲಿ ಭಾರತದ ಬಾಕ್ಸರ್‌ಗೆ ಉಕ್ರೇನ್‌ನ ಅಲೆಕ್ಸಾಂಡರ್‌ ಕಿಜನಿಯಾಕ್ ಸವಾಲು ಎದುರಾಗಿದೆ.

ಭಾರತದ ಇನ್ನುಳಿದ ಬಾಕ್ಸರ್‌ಗಳಾದ ನರೇಂದರ್ ಬೇರ್ವಾಲ್‌ (+92 ಕೆಜಿ), ವರಿಂದರ್ ಸಿಂಗ್‌ (60 ಕೆಜಿ) ಮತ್ತು ಲಕ್ಷ್ಯ ಚಾಹರ್‌ (86 ಕೆಜಿ) ಮೊದಲ ಬೌಟ್‌ನಲ್ಲಿ ಸೋಲನುಭವಿಸಿದರು.

ADVERTISEMENT

ನರೇಂದರ್2-3ರಿಂದ ಸ್ಪೇನ್‌ನ ಅಯೂಬಾ ಘಡಪಾ ಡ್ರಿಸ್ಸಿ ಎದುರು, ವರಿಂದರ್ ಮತ್ತು ಚಾಹರ್ ಕ್ರಮವಾಗಿ 0–5 ಮತ್ತು 1–4ರಿಂದ ರಷ್ಯಾದ ಅರ್ಥರ್‌ ಶುಭಂಕುಲೊವ್‌ ಮತ್ತು ಶರಬುತ್ತಿನ್‌ ಆಟೆವ್‌ ಎದುರು ಮಣಿದರು.

36 ದೇಶಗಳ 450ಕ್ಕೂ ಹೆಚ್ಚು ಬಾಕ್ಸರ್‌ಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಭಾರತದ 17 ಮಂದಿಯ ತಂಡ ಅದೃಷ್ಟ ಪರೀಕ್ಷೆಗೆ ತೆರಳಿದೆ. ಅದರಲ್ಲಿ ಏಳು ಮಂದಿ ಪುರುಷ ಮತ್ತು 10 ಮಹಿಳಾ ಬಾಕ್ಸರ್‌ಗಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.