ADVERTISEMENT

ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಪ್ರೀಕ್ವಾರ್ಟರ್‌ಗೆ ನೀತು, ಪ್ರೀತಿ

ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಮಂಜುಗೆ ಜಯ

ಪಿಟಿಐ
Published 18 ಮಾರ್ಚ್ 2023, 13:08 IST
Last Updated 18 ಮಾರ್ಚ್ 2023, 13:08 IST
ನೀತು ಗಂಗಾಸ್‌– ಪಿಟಿಐ ಚಿತ್ರ
ನೀತು ಗಂಗಾಸ್‌– ಪಿಟಿಐ ಚಿತ್ರ   

ನವದೆಹಲಿ: ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಬಾಕ್ಸರ್‌ಗಳ ಗೆಲುವಿನ ಅಭಿಯಾನ ಮುಂದುವರಿದಿದೆ. ನೀತು ಗಂಗಾಸ್‌, ಪ್ರೀತಿ ಮತ್ತು ಮಂಜು ಬಂಬೊರಿಯಾ ಅವರು ಪ್ರೀಕ್ವಾ‌ರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ನೀತು ಅವರು 48 ಕೆಜಿ ವಿಭಾಗದ ಮೊದಲ ಸುತ್ತಿನ ಬೌಟ್‌ನಲ್ಲಿ ಕೊರಿಯಾದ ಡೊಯೆನ್ ಕಂಗ್ ಎದುರು ಆರ್‌ಎಸ್‌ಸಿ (ರೆಫರಿಯಿಂದ ಪಂದ್ಯ ಸ್ಥಗಿತ) ಆಧಾರದಲ್ಲಿ ಗೆದ್ದರು.

ಕಳೆದ ಆವೃತ್ತಿಯಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದ್ದ ನೀತು ಈ ಬೌಟ್‌ನಲ್ಲಿ ಬಿರುಸಿನ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು. ಕೆ.ಡಿ. ಜಾಧವ್ ಒಳಾಂಗಣದಲ್ಲಿ ನಡೆದ ಬೌಟ್‌ನಲ್ಲಿ ಗೆಲುವಿನ ನಗೆ ಬೀರಿದರು.

ADVERTISEMENT

54 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಪ್ರೀತಿ, ತಮ್ಮ ಎರಡನೇ ಸುತ್ತಿನ ಬೌಟ್‌ನಲ್ಲಿ 4–3ರಿಂದ ರೊಮೇನಿಯಾದ ಲ್ಯಾಕ್ರೊಮಿಯೊರಾ ಪೆರಿಜೊಸ್ ಅವರನ್ನು ಮಣಿಸಿದರು. ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಇಬ್ಬರೂ ಬಾಕ್ಸರ್‌ಗಳು ಬೆವರು ಹರಿಸಿದರು. ಒಂದು ಹಂತದಲ್ಲಿ 2–3ರಿಂದ ಹಿನ್ನಡೆಯಲ್ಲಿದ್ದ ಪ್ರೀತಿ ನಿಖರ ಪಂಚ್‌ಗಳ ಮೂಲಕ ಪುಟಿದೆದ್ದು ಜಯ ಒಲಿಸಿಕೊಂಡರು.

ಮತ್ತೊಂದು ಬೌಟ್‌ನಲ್ಲಿ 66 ಕೆಜಿ ವಿಭಾಗದ ಸ್ಪರ್ಧಿ ಮಂಜು 5-0ಯಿಂದ ನ್ಯೂಜಿಲೆಂಡ್‌ನ ಕಾರಾ ವೇರ್‌ರಾವು ಎದುರು ಗೆದ್ದು 16ರ ಘಟ್ಟಕ್ಕೆ ಕಾಲಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.