ADVERTISEMENT

ಕೋವಿಡ್: ಹಾಂಗ್‌ಕಾಂಗ್, ಮಕಾವ್ ಓಪನ್ ಬ್ಯಾಡ್ಮಿಂಟನ್ ರದ್ದು

ಪಿಟಿಐ
Published 1 ಸೆಪ್ಟೆಂಬರ್ 2022, 15:30 IST
Last Updated 1 ಸೆಪ್ಟೆಂಬರ್ 2022, 15:30 IST

ಕೌಲಾಲಂಪುರ: ಆತಿಥೇಯ ರಾಷ್ಟ್ರಗಳಲ್ಲಿ ಕೋವಿಡ್ ನಿರ್ಬಂಧ ನಿಯಮಗಳು ಇರುವುದರಿಂದ ಹಾಂಗ್‌ಕಾಂಗ್ ಓಪನ್ ಸೂಪರ್ 500 ಹಾಗೂ ಮಕಾವ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಗಳನ್ನು ರದ್ದುಪಡಿಸಲಾಗಿದೆ.

ಮಕಾವು ಓಪನ್ ಟೂರ್ನಿ ನವೆಂಬರ್ 1 ರಿಂದ 6 ಹಾಗೂ ಹಾಂಗ್‌ಕಾಂಗ್ ಓಪನ್ ಟೂರ್ನಿಯನ್ನು ನ.8ರಿಂದ 13ರವರೆಗೆ ಆಯೋಜಿಸಲಾಗಿತ್ತು.

‘ಎರಡೂ ದೇಶಗಳಲ್ಲಿರುವ ಕೋವಿಡ್–19 ಪರಿಸ್ಥಿತಿ ಹಾಗೂ ಕ್ವಾರಂಟೈನ್ ನಿಯಮಗಳು ಕ್ಲಿಷ್ಟವಾಗಿವೆ. ಹಾಂಗ್‌ಕಾಂಗ್ ಬ್ಯಾಡ್ಮಿಂಟನ್ ಸಂಸ್ಥೆಯು ತಮ್ಮ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ. ಟೂರ್ನಿ ಆಯೋಜನೆಗೆ ಅನುಕೂಲಕರ ವ್ಯವಸ್ಥೆಗಳನ್ನು ಮಾಡಿಕೊಡಲು ಮನವಿ ಮಾಡುತ್ತಿದೆ. ಒಂದೊಮ್ಮೆ ಸರ್ಕಾರ ಒಪ್ಪಿದರೆ ಮುಂದಿನ ಯೋಚನೆ ಮಾಡಲಾಗುವುದು’ ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್‌) ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.