ADVERTISEMENT

ಚೆಸ್: ಮುನ್ನಡೆ ಕಾಯ್ದುಕೊಂಡ ಗಹನ್‌

ಸತೀಶ ಬಿ.
Published 6 ಜುಲೈ 2019, 20:01 IST
Last Updated 6 ಜುಲೈ 2019, 20:01 IST
ಕಲಬುರ್ಗಿಯ ಎಸ್‌ಬಿಆರ್ ರೆಸಿಡೆನ್ಶಿಯಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿರುವ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರಿನ ಗಹನ್ ಎಂ.ಜಿ. (ಎಡಬದಿ) ಹಾಗೂ ಶಾಬ್ದಿಕ್ ವರ್ಮಾ ಅವರ ನಡುವಿನ ಪೈಪೋಟಿ. – ಪ್ರಜಾವಾಣಿ ಚಿತ್ರ
ಕಲಬುರ್ಗಿಯ ಎಸ್‌ಬಿಆರ್ ರೆಸಿಡೆನ್ಶಿಯಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿರುವ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರಿನ ಗಹನ್ ಎಂ.ಜಿ. (ಎಡಬದಿ) ಹಾಗೂ ಶಾಬ್ದಿಕ್ ವರ್ಮಾ ಅವರ ನಡುವಿನ ಪೈಪೋಟಿ. – ಪ್ರಜಾವಾಣಿ ಚಿತ್ರ   

ಕಲಬುರ್ಗಿ: ಅಗ್ರ ಶ್ರೇಯಾಂಕದ ಗಹನ್ ಎಂ.ಜಿ, ಗುಲಬರ್ಗಾ ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ 25 ವರ್ಷದೊಳಗಿನವರ ರಾಜ್ಯ ಚೆಸ್ ಚಾಂಪಿಯನ್‌ಷಿಪ್‌ನ ಆರನೇ ಸುತ್ತಿನ ನಂತರ ಗರಿಷ್ಠ ಆರು ಅಂಕಗಳೊಡನೆ ಅಗ್ರಸ್ಥಾನಕ್ಕೇರಿದ್ದಾರೆ.

ನಗರದ ಶರಣಬಸವೇಶ್ವರ ರೆಸಿಡೆನ್ಶಿಯಲ್ ಪಬ್ಲಿಕ್ ಶಾಲೆಯಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಶನಿವಾರದ ಕೊನೆಗೆ ಶಿರಸಿಯ ನಿತೀಶ್‌ ಭಟ್‌, ಶಿವಮೊಗ್ಗದ ಎಚ್‌.ಎಲ್‌.ರಜತ್‌ ಐತಾಳ್‌ ಅವರು ತಲಾ ಐದೂವರೆ ಅಂಕ ಗಳಿಸಿದ್ದು ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.

ಮಂಗಳೂರಿನ ಗಹನ್ ಆರನೇ ಸುತ್ತಿನಲ್ಲಿ, ಎರಡನೇ ಶ್ರೇಯಾಂಕದ ಧರ್ಮಸ್ಥಳದ ಆಟಗಾರ ಶಾಬ್ದಿಕ್ ವರ್ಮಾ (4.5 ಅಂಕ) ಅವರನ್ನು ಮಣಿಸಿದರೆ, ರಜತ್‌ ಐತಾಳ್‌, ರಾಯಚೂರಿನ ಶ್ರೀನಿಧಿ ಕುಲಕರ್ಣಿ (4.5) ವಿರುದ್ಧ, ನಿತೀಶ್‌, ಶಿವಮೊಗ್ಗದ ಅಜಯ್‌ ಎಸ್‌.ಎಂ. (4.5) ವಿರುದ್ಧ ಜಯಗಳಿಸಿದರು. ಮೊದಲ ಈ ಮೂರು ಬೋರ್ಡ್‌ಗಳಲ್ಲಿ ಬಿಳಿ ಕಾಯಿಗಳನ್ನು ಮುನ್ನಡೆಸಿದವರು ಜಯಗಳಿಸಿದರೆ, ನಂತರದ ಐದು ಬೋರ್ಡ್‌ಗಳಲ್ಲಿ ಕಪ್ಪು ಕಾಯಿಗಳಲ್ಲಿ ಆಡಿದ ಆಟಗಾರರು ಪೂರ್ಣ ಪಾಯಿಂಟ್‌ ಪಡೆದರು.

ADVERTISEMENT

ಏಳು ಆಟಗಾರರು ತಲಾ ಐದು ಅಂಕ ಗಳಿಸಿದ್ದು ಮೂರನೇ ಸ್ಥಾನದಲ್ಲಿದ್ದಾರೆ. ಪುತ್ತೂರಿನ ಪ್ರಶಾಂತ್‌ ನಾಯಕ್‌, ಬೆಂಗಳೂರಿನ ಸುಜಯ್‌ ಬಿ.ಎಂ., ಮೈಸೂರಿನ ಎಲ್‌. ವಿವೇಕಾನಂದ, ಕಲಬುರ್ಗಿಯ ಓವೈಸ್‌ ಮೊಹಮ್ಮದ್‌, ಸಿದ್ಧಾಂತ್‌ ಧಾರವಾಡ್‌, ದಾಮೋದರ ಮುಂಡ್ರಿಕೇರಿ ಮತ್ತು ಬೆಳಗಾವಿಯ ಮನೋಜ್‌ ಹಡಪದ ಅವರು ಈ ಏಳು ಆಟಗಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.