ADVERTISEMENT

ಚೆಸ್‌: ಹರಿಕೃಷ್ಣಗೆ ಎರಡನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 21:16 IST
Last Updated 14 ಜೂನ್ 2020, 21:16 IST
ಪೆಂಟಾಲ ಹರಿಕೃಷ್ಣ (ಬಲ)– ಸಂಗ್ರಹ ಚಿತ್ರ
ಪೆಂಟಾಲ ಹರಿಕೃಷ್ಣ (ಬಲ)– ಸಂಗ್ರಹ ಚಿತ್ರ   

ಚೆನ್ನೈ(ಪಿಟಿಐ): ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಪೆಂಟಾಲ ಹರಿಕೃಷ್ಣ ಅವರು ಶಾರ್ಜಾ ಆನ್‌ಲೈನ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಭಾನುವಾರ ನಡೆದ ಅಂತಿಮ ಸುತ್ತಿನ ಪೈಪೋಟಿಯಲ್ಲಿ ಹರಿಕೃಷ್ಣ ಅವರು ಪೋಲೆಂಡ್‌ನ ಗ್ರ್ಯಾಂಡ್‌ ಮಾಸ್ಟರ್‌ ರಾಡೊಸ್ಲಾವ್‌ ವೊಜ್ತಾಸ್‌ಜೆಕ್‌ ವಿರುದ್ಧ ಪರಾಭವಗೊಂಡರು. ಭಾರತದ ಆಟಗಾರ, ಹತ್ತು ಸುತ್ತುಗಳಿಂದ ಒಟ್ಟು 6.5 ಪಾಯಿಂಟ್ಸ್‌ ಕಲೆಹಾಕಿದರು.

ಅಜರ್‌ಬೈಜಾನ್‌ನ ಆಟಗಾರ ಶಖ್ರಿಯಾರ್‌ ಮಮೆಡ್ಯರೊವ್‌ ಅವರು ಚಾಂಪಿಯನ್‌ ಆದರು. ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ಶಖ್ರಿಯಾರ್‌ ಒಟ್ಟು 7.5 ಪಾಯಿಂಟ್ಸ್‌ ಸಂಗ್ರಹಿಸಿದರು.

ಶಖ್ರಿಯಾರ್‌ ಅವರು ₹ 2.27 ಲಕ್ಷ ಬಹುಮಾನ ಜೇಬಿಗಿಳಿಸಿದರೆ, ಹರಿಕೃಷ್ಣ ಅವರು ₹1.70 ಲಕ್ಷ ಪಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.