ADVERTISEMENT

ಚೆಸ್‌ ಒಲಿಂಪಿಯಾಡ್‌: ಭಾರತ ತಂಡಗಳ ಆಯ್ಕೆಗೆ ಆನಂದ್ ಮಾರ್ಗದರ್ಶಕ

ಪಿಟಿಐ
Published 2 ಮೇ 2022, 13:01 IST
Last Updated 2 ಮೇ 2022, 13:01 IST
ವಿಶ್ವನಾಥನ್‌ ಆನಂದ್‌– ಪಿಟಿಐ ಚಿತ್ರ
ವಿಶ್ವನಾಥನ್‌ ಆನಂದ್‌– ಪಿಟಿಐ ಚಿತ್ರ   

ಚೆನ್ನೈ: ಭಾರತದಲ್ಲಿ ಈ ವರ್ಷ ಜುಲೈನಲ್ಲಿ ಆರಂಭವಾಗಲಿರುವ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತದ ಎರಡು ತಂಡಗಳು ಆಡಲಿವೆ. ಮುಕ್ತ ಮತ್ತು ಮಹಿಳಾ ವಿಭಾಗಗಳಿಗೆ ತಲಾ ಎರಡು ತಂಡಗಳನ್ನು ಪ್ರಕಟಿಸಲಾಗಿದ್ದು, ಐದು ಬಾರಿಯ ವಿಶ್ವ ಚಾಂಪಿಯನ್‌ ವಿಶ್ವನಾಥನ್ ಆನಂದ್‌ ತಂಡಗಳ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಜುಲೈ 28ರಿಂದ ಆಗಸ್ಟ್‌ 10ರವರೆಗೆ ಚಾಂಪಿಯನ್‌ಷಿಪ್‌ ನಡೆಯಲಿದ್ದು, ಆತಿಥೇಯ ತಂಡವಾಗಿರುವುದರಿಂದ ಮೊದಲ ಬಾರಿಗೆ ಎರಡೂ ವಿಭಾಗಗಳಿಗೆ ಎರಡು ತಂಡಗಳನ್ನು ಆಡಿಸುವ ಅವಕಾಶ ಭಾರತಕ್ಕೆ ಲಭಿಸಿದೆ.

14 ದಿನಗಳು ನಡೆಯುವ ಕೂಟದಲ್ಲಿ 150 ದೇಶಗಳ ಪ್ರಮುಖ ಚೆಸ್‌ ಪಟುಗಳು ಭಾಗವಹಿಸಲಿದ್ದಾರೆ.

ADVERTISEMENT

ಗ್ರ್ಯಾಂಡ್‌ಮಾಸ್ಟರ್‌ಗಳಾದ ಶ್ರೀನಾಥ್‌ ಮತ್ತು ಆರ್‌.ಬಿ.ರಮೇಶ್ ಅವರು ಕ್ರಮವಾಗಿ ಮುಕ್ತ ವಿಭಾಗದ ಮೊದಲ ಮತ್ತು ಎರಡನೇ ತಂಡಗಳು ಕೋಚ್‌ಗಳಾಗಿದ್ದಾರೆ. ಗ್ರ್ಯಾಂಡ್‌ಮಾಸ್ಟರ್‌ಗಳಾದ ಅಭಿಜೀತ್ ಕುಂಟೆ ಮತ್ತು ಸ್ವಪ್ನಿಲ್‌ ಧೋಪಡೆ ಮಹಿಳಾ ತಂಡಗಳ ತರಬೇತಿ ನಿರ್ವಹಿಸಲಿದ್ದಾರೆ.

ತಂಡಗಳು: ಮುಕ್ತ ವಿಭಾಗ ‘ಎ’: ವಿದಿತ್ ಗುಜರಾತಿ, ಪಿ.ಹರಿಕೃಷ್ಣ, ಅರ್ಜುನ್ ಎರಿಗೈಸಿ, ಎಸ್‌.ಎಲ್‌. ನಾರಾಯಣನ್‌, ಕೆ. ಶಶಿಕಿರಣ್‌. ‘ಬಿ’: ನಿಹಾಲ್‌ ಸರಿನ್‌, ಡಿ.ಗುಕೇಶ್‌, ಬಿ.ಅಧಿಬನ್‌, ಆರ್‌. ಪ್ರಜ್ಞಾನಂದ, ರೌನಕ್ ಸಾಧ್ವಾನಿ.

ಮಹಿಳಾ ವಿಭಾಗ ‘ಎ’: ಕೊನೇರು ಹಂಪಿ, ದ್ರೋಣವಳ್ಳಿ ಹಾರಿಕಾ, ಆರ್‌.ವೈಶಾಲಿ, ತಾನಿಯಾ ಸಚ್‌ದೇವ್‌, ಭಕ್ತಿ ಕುಲಕರ್ಣಿ. ‘ಬಿ‘: ವಂತಿಕಾ ಅಗರವಾಲ್‌, ಸೌಮ್ಯಾ ಸ್ವಾಮಿನಾಥನ್‌, ಮೇರಿ ಆ್ಯನ್ ಗೋಮ್ಸ್, ಪದ್ಮಿಣಿ ರಾವತ್‌ ಮತ್ತು ದಿವ್ಯಾ ದೇಶಮುಖ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.