ADVERTISEMENT

ಫಿಡೆ ಮೊರೆ ಹೋದ ಆಟಗಾರರ ವೇದಿಕೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 19:56 IST
Last Updated 25 ಏಪ್ರಿಲ್ 2020, 19:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ಭಾರತ ಚೆಸ್‌ ಫೆಡರೇಷನ್‌ (ಎಐಸಿಎಫ್‌) ಆಗುಹೋಗುಗಳಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ಪರಿಹರಿಸುವಂತೆ ಚೆಸ್‌ ಆಟಗಾರರ ವೇದಿಕೆಯು ವಿಶ್ವ ಚೆಸ್‌ ಫೆಡರೇಷನ್‌ (ಫಿಡೆ)ಗೆ ಮನವಿ ಮಾಡಿದೆ.

ವೇದಿಕೆಯು ದೇಶದ ಚೆಸ್‌ ಆಟಗಾರರ ಹಕ್ಕು, ಅಭಿವೃದ್ಧಿ ಮತ್ತು ಹೊಣೆಗಾರಿಕೆಯ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಕಳೆದ ಕೆಲವು ತಿಂಗಳಿಂದ ಎಐಸಿಎಫ್‌ ಆಂತಃಕಲಹ, ಕಾನೂನು ಸಮರಗಳಿಂದ ತತ್ತರಿಸುತ್ತಿದೆ. ಈ ಬಗ್ಗೆ ಫಿಡೆ ಮುಖ್ಯಸ್ಥರಿಗೆ ಪತ್ರ ಬರೆದಿರುವ ವೇದಿಕೆಯ ಅಧ್ಯಕ್ಷ ವರ್ಗೀಸ್‌ ಕೋಶಿ ಅವರು ಈ ಬಿಕ್ಕಟ್ಟು ಬಗೆಹರಿಸಲು ಮಧ್ಯಪ್ರವೇಶಿಸಬೇಕೆಂದು ಪ‍ತ್ರ ಬರೆದಿದ್ದಾರೆ.

‘ಫಿಡೆ ಈ ಬಿಕ್ಕಟ್ಟು ಪರಿಹರಿಸಲು ಮಧ್ಯಪ್ರವೇಶಿಸಬೇಕು. ಸಹಕಾರ ನೀಡಲು ಸಿದ್ಧ ಎಂದು ಭಾರತದ ಆಟಗಾರರ ಪರವಾಗಿ ಮನವಿ ಮಾಡಿಕೊಳ್ಳುವುದಾಗಿ’ ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.