ADVERTISEMENT

ಚೆಸ್‌: ಪ್ರಗ್ನಾನಂದ ಗೆಲುವಿನ ಹ್ಯಾಟ್ರಿಕ್

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 12:37 IST
Last Updated 18 ಆಗಸ್ಟ್ 2022, 12:37 IST
ಪ್ರಗ್ನಾನಂದ
ಪ್ರಗ್ನಾನಂದ   

ಮಿಯಾಮಿ (ಪಿಟಿಐ): ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಗ್ನಾನಂದ ಅವರು ಎಫ್‌ಟಿಎಕ್ಸ್‌ ಕ್ರಿಪ್ಟೊ ಕಪ್‌ ಚೆಸ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ಪಡೆದರು.

ಗುರುವಾರ ನಡೆದ ಮೂರನೇ ಸುತ್ತಿನಲ್ಲಿ ಅವರು 2.5–1.5 ಪಾಯಿಂಟ್‌ಗಳಿಂದ ಹ್ಯಾನ್ಸ್‌ ನೀಮನ್‌ ಎದುರು ಗೆದ್ದರು.

ನಾಲ್ಕು ರ‍್ಯಾಪಿಡ್‌ ಪಂದ್ಯಗಳ ಮೊದಲ ಹಣಾಹಣಿಯಲ್ಲಿ ಪ್ರಗ್ನಾನಂದ ಅವರು ನೀಮನ್‌ ಎದುರು ಸೋತರು. ಆದರೆ ಎರಡನೇ ಮತ್ತು ನಾಲ್ಕನೇ ಗೇಮ್‌ಗಳಲ್ಲಿ ಗೆದ್ದ ಅವರು ಮೂರನೇ ಗೇಮ್‌ಅನ್ನು ಡ್ರಾ ಮಾಡಿಕೊಂಡು ಪೂರ್ಣ ಪಾಯಿಂಟ್ಸ್ ಗಿಟ್ಟಿಸಿಕೊಂಡರು.

ADVERTISEMENT

ಈ ಗೆಲುವಿನ ಮೂಲಕ 17 ವರ್ಷದ ಪ್ರಗ್ನಾನಂದ, ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಜತೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಕಾರ್ಲ್‌ಸನ್‌ ಮೂರನೇ ಸುತ್ತಿನಲ್ಲಿ 2.5–1.5 ರಿಂದ ಲೆವೊನ್‌ ಅರೊನಿಯನ್‌ ಅವರನ್ನು ಮಣಿಸಿದರು.

ಪ್ರಗ್ನಾನಂದ ಮೊದಲ ಎರಡು ಸುತ್ತುಗಳಲ್ಲಿ ಕ್ರಮವಾಗಿ ಅಲಿರೆಜಾ ಫಿರೊಜಾ ಮತ್ತು ಅನೀಶ್‌ ಗಿರಿ ಅವರನ್ನು ಸೋಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.