ADVERTISEMENT

ಚೆಸ್‌: ಪ್ರಜ್ಞಾನಂದಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 18:24 IST
Last Updated 16 ಜುಲೈ 2022, 18:24 IST

ಪ್ಯಾರಾಸಿನ್‌, ಸರ್ಬಿಯಾ (ಪಿಟಿಐ): ಭಾರತದ ಆರ್‌. ಪ್ರಜ್ಞಾನಂದ ಅವರು ಇಲ್ಲಿ ನಡೆದ ಪ್ಯಾರಾಸಿನ್‌ ಓಪನ್ ‘ಎ’ ಚೆಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಶನಿವಾರ ಕೊನೆಗೊಂಡ ಟೂರ್ನಿಯ ಒಂಬತ್ತು ಸುತ್ತುಗಳಲ್ಲಿ ಅವರು ಒಟ್ಟು ಎಂಟು ಪಾಯಿಂಟ್ಸ್ ಕಲೆಹಾಕಿದರು. ರಷ್ಯಾದ ಅಲೆಕ್ಸಾಂಡರ್ ಪೆಡ್ಕೆ (7.5 ಪಾಯಿಂಟ್ಸ್) ಎರಡನೇ ಸ್ಥಾನ ಪಡೆದರೆ, ಕಜಕಸ್ತಾನದ ಅಲಿಶೇರ್ ಸುಲೆಯಮೆನೊವ್‌ (7) ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ಭಾರತದ ಎ.ಎಲ್‌. ಮುತ್ತಯ್ಯ ಏಳು ಪಾಯಿಂಟ್ಸ್ ಗಳಿಸಿದರೂ ಟೈಬ್ರೇಕ್‌ನಲ್ಲಿ ಅಲಿಶೇರ್ ಎದುರು ಹಿನ್ನಡೆ ಅನುಭವಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.