ಬೆಂಗಳೂರು: ಭಾರತದ ಗ್ರ್ಯಾಂಡ್ ಮಾಸ್ಟರ್ ದೀಪನ್ ಚಕ್ರವರ್ತಿ ಅವರು ‘ನಮ್ಮ ಬೆಂಗಳೂರು ಇಂಟರ್
ನ್ಯಾಷನಲ್ ಗ್ರ್ಯಾಂಡ್‌ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿ’ಯ ನಾಲ್ಕನೇ ಸುತ್ತಿನಲ್ಲಿ ದ್ವಿತೀಯ ಶ್ರೇಯಾಂಕದ ಕರೆನ್ ಗ್ರೆಗೋರಿಯನ್ ಅವರನ್ನು ಸೋಲಿಸಿ, ಶನಿವಾರದ ಕೊನೆಗೆ ಆರು ಮಂದಿ ಆಟಗಾರರೊಂದಿಗೆ ಮುನ್ನಡೆ ಹಂಚಿಕೊಂಡಿದ್ದಾರೆ.
ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಏಳು ಮಂದಿ ಆಟಗಾರರು ತಲಾ 4 ಅಂಕ ಗಳಿಸಿದ್ದಾರೆ. ಎರಡನೇ ದಿನ ಇಬ್ಬರು ಐಎಂ ಆಟಗಾರ ರನ್ನು ಸೋಲಿಸಿ ಗನನ ಸೆಳೆದಿದ್ದ ಪರಾಸ್ ಭೊಯಿರ್ ಅವರು ಅಗ್ರ ಶ್ರೇಯಾಂಕದ ಪಾ ಇನಿಯನ್ (ತಮಿಳುನಾಡು, 3.5) ಅವರಿಗೆ ಮಣಿದರು. ಜಿಎಂಗಳಾದ ದೀಪನ್ ಚಕ್ರವರ್ತಿ (ತಮಿಳುನಾಡು), ಮ್ಯಾನುವೆಲ್ ಪೆಟ್ರೋಸಿಯಾನ್ (ಅರ್ಮೆನಿಯಾ), ಪ್ರಣವ್ ಆನಂದ್ (ಕರ್ನಾಟಕ), ಸಂಕೇತ್ ಚಕ್ರವರ್ತಿ (ಪಶ್ಚಿಮ ಬಂಗಾಳ), ಲೆವೊನ್ ಪಂಟ್ಸುಲಾಲಿಯಾ (ಜಾರ್ಜಿಯಾ) ಮತ್ತು ಐಎಂಗಳಾದ ವಿಯಾನಿ ಡಿಕುನ್ಹಾ (ಕರ್ನಾಟಕ) ಮತ್ತು ವಿ.ಎ.ವಿ. ರಾಜೇಶ್ ಮುನ್ನಡೆ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.