
ಚೆಸ್
ಪಣಜಿ (ಪಿಟಿಐ): ಭಾರತದ ಎಸ್.ಎಲ್.ನಾರಾಯಣನ್ ಅವರು ಪೆರುವಿನ ಸ್ಟೀವನ್ ರೋಜಾಸ್ ಅವರನ್ನು ಸೋಮವಾರ ಟೈಬ್ರೇಕರ್‌ನಲ್ಲಿ ಮಣಿಸಿ ಫಿಡೆ ವಿಶ್ವಕಪ್ ಚೆಸ್ ಟೂರ್ನಿಯ 128ರ ಸುತ್ತಿಗೆ ಅರ್ಹತೆ ಪಡೆದರು.
ಇವರಿಬ್ಬರ ನಡುವೆ ಕ್ಲಾಸಿಕಲ್ ಪಂದ್ಯಗಳು 1–1 ಸಮನಾಗಿದ್ದವು. ವೇಗದ ಮಾದರಿಯ ಆಟದಲ್ಲಿ ಕೌಶಲ ಹೊಂದಿರುವ ನಾರಾಯಣನ್, ಟೈಬ್ರೇಕರ್‌ನ ಮೊದಲ ಆಟದಲ್ಲಿ ಕಪ್ಪುಕಾಯಿಗಳಲ್ಲಿ ಆಡಿ ಎದುರಾಳಿಯ ರಕ್ಷಣಾ ಕೋಟೆಯನ್ನು ಭೇದಿಸಿದರು. ಎರಡನೇ ಆಟವನ್ನು ಅವರು ಕೇವಲ 22 ನಡೆಗಳಲ್ಲಿ ಗೆದ್ದರು.
ಕೋಲ್ಕತ್ತದ ದೀಪ್ತಾಯನ ಘೋಷ್, ಚೀನಾದ ಪೆಂಗ್ ಷಿಯಾಂಗ್‌ಲಿಯಾನ್ ಅವರನ್ನು ಟೈಬ್ರೇಕರ್‌ನ ಎರಡೂ ಪಂದ್ಯಗಳಲ್ಲಿ ಸೋಲಿಸಿ ಎರಡನೇ ಸುತ್ತಿಗೆ ಮುನ್ನಡೆದರು.
ವಿ. ಪ್ರಣವ್, ರೋನಕ್ ಸಾಧ್ವಾನಿ, ಎಂ. ಪ್ರಾಣೇಶ್, ಪಾ.ಇನಿಯನ್, ಕಾರ್ತಿಕ್ ವೆಂಕಟರಾಮನ್, ಅನುಭವಿ ಸೂರ್ಯಶೇಖರ ಗಂಗೂಲಿ ಅವರೂ ತಮ್ಮ ಎದುರಾಳಿಗಳನ್ನು ಟೈಬ್ರೇಕರ್‌ನಲ್ಲಿ ಮಣಿಸಿ ಮುಂದಿನ ಸುತ್ತಿಗೆ ಮುನ್ನಡೆದರು.
ಲಿಯಾನ್‌ಗೆ ಸೋಲು:
ಆದರೆ ಭಾರತದ ಇತರ ಗ್ರ್ಯಾಂಡ್‌ಮಾಸ್ಟರ್‌ಗಳಾದ ನೀಲಾಶ್ ಸಹಾ, ಲಿಯಾನ್ ಲ್ಯೂಕ್ ಮೆಂಡೋನ್ಸಾ ಸೋಲನುಭವಿಸಿದರು. ಮೆಂಡೋನ್ಸಾ, ಚೀನಾದ ಶಿಕ್ಸು ಬಿ ವಾಂಗ್ ಅವರಿಗೆ ಮಣಿದರು. ಜಿ.ಬಿ. ಹರ್ಷವರ್ಧನ ಅವರು ಟರ್ಕಿಯ ಯಿಲ್ಮಾಝ್ ಮುಸ್ತಫಾ ಅವರಿಗೆ 0.5–1.5 ರಿಂದ ಮಣಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.