ADVERTISEMENT

ಏಷ್ಯನ್‌ ಕೂಟಕ್ಕೆ ರಾಜ್ಯದ ಚೇತನ್‌

ಪಿಟಿಐ
Published 28 ಜೂನ್ 2018, 20:13 IST
Last Updated 28 ಜೂನ್ 2018, 20:13 IST

ಗುವಾಹಟಿ : ಕರ್ನಾಟಕದ ಬಿ.ಚೇತನ್‌ ಅವರು ಮುಂಬರುವ ಏಷ್ಯನ್‌ ಕ್ರೀಡಾಕೂಟಕ್ಕೆ ಅರ್ಹತೆ ಗಳಿಸಿದ್ದಾರೆ.

ರಾಷ್ಟ್ರೀಯ ಸೀನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಪುರುಷರ ಹೈಜಂಪ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಅವರು ಈ ಸಾಧನೆ ಮಾಡಿದ್ದಾರೆ.

ಗುರುವಾರ ನಡೆದ ಸ್ಪರ್ಧೆಯಲ್ಲಿ ಚೇತನ್‌ 2.25 ಮೀಟರ್ಸ್‌ ಎತ್ತರ ಜಿಗಿದರು.

ADVERTISEMENT

ಏಷ್ಯನ್‌ ಕೂಟಕ್ಕೆ ಅರ್ಹತೆ ಗಳಿಸಲು ಇಷ್ಟೇ (2.25ಮೀ.) ಮಾನದಂಡ ನಿಗದಿ ಮಾಡಲಾಗಿತ್ತು.

ಕ್ಯಾತಿಗೆ ಚಿನ್ನ: ಮಹಿಳೆಯರ ಪೋಲ್‌ವಾಲ್ಟ್‌ ಸ್ಪರ್ಧೆಯಲ್ಲಿ ಕರ್ನಾ ಟಕದ ಕ್ಯಾತಿ ವಖಾರಿಯಾ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಅವರು 4.00 ಮೀಟರ್ಸ್‌ ಸಾಮರ್ಥ್ಯ ತೋರಿದರು.

ಮಹಿಳೆಯರ 4X100 ಮೀಟರ್ಸ್‌ ರಿಲೇ ಸ್ಪರ್ಧೆಯಲ್ಲಿ ಕರ್ನಾಟಕ ಚಿನ್ನದ ಪದಕ ಗೆದ್ದಿತು.

ಅಪ್ಸಾನ ಬೇಗಂ, ರೀನಾ ಜಾರ್ಜ್‌, ಪಿ.ಜೆ.ಸ್ನೇಹಾ ಮತ್ತು ಪ್ರಜ್ಞಾ ಎಸ್‌ ಪ್ರಕಾಶ್‌ ಅವರಿದ್ದ ತಂಡ 46.12 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿತು.

ಜಾವಲಿನ್‌ ಥ್ರೋ ಸ್ಪರ್ಧಿ ಶಿವಪಾಲ್‌ ಸಿಂಗ್‌ ಮತ್ತು ಅನುಭವಿ ಸ್ಟೀಫಲ್‌ಚೇಸ್‌ ಸ್ಪರ್ಧಿ ಸುಧಾ ಸಿಂಗ್ ಅವರೂ ಏಷ್ಯನ್‌ ಕೂಟಕ್ಕೆ ಅರ್ಹತೆ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.