ಪಿ.ವಿ.ಸಿಂಧು ( ಸಂಗ್ರಹ ಚಿತ್ರ)
ಶೆಂಝೆನ್ (ಚೀನಾ): ಭಾರತದ ಅಗ್ರ ಆಟಗಾರ್ತಿ ಪಿ.ವಿ.ಸಿಂಧು ಅವರು ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಜೂಲಿ ದವಲ್ ಚಾಕೋಬ್ಸನ್ ಅವರನ್ನು ಬುಧವಾರ ನೇರ ಗೇಮ್‌ಗಳಿಂದ ಹಿಮ್ಮೆಟ್ಟಿಸಿದರು. ಆದರೆ ಯುವ ತಾರೆ ಆಯುಷ್ ಶೆಟ್ಟಿ ಮೊದಲ ಸುತ್ತಿನಲ್ಲಿ ಹೊರಬಿದ್ದರು.
20 ವರ್ಷ ವಯಸ್ಸಿನ ಆಯುಷ್ ತೀವ್ರ ಹೋರಾಟದ ನಂತರ ವಿಶ್ವದ ಐದನೇ ಕ್ರಮಾಂಕದ ಆಟಗಾರ ಚೌ ಟಿಯೆನ್ ಚೆನ್ ಅವರಿಗೆ 19–21, 21–12, 16–21ರಲ್ಲಿ ಮಣಿದರು. 68 ನಿಮಿಷ ನಡೆದ ಪಂದ್ಯದ ನಿರ್ಣಾಯಕ ಗೇಮ್‌ನಲ್ಲಿ ಒಂದು ಹಂತದಲ್ಲಿ ಸ್ಕೋರ್ 13–13 ಸಮನಾಗಿತ್ತು. ಈ ಹಂತದಲ್ಲಿ ಆಟದ ಮಟ್ಟ ಸಾಕಷ್ಟು ಸುಧಾರಿಸಿದ ಚೀನಾ ತೈಪೆಯ ಆಟಗಾರ ಗೆಲುವನ್ನು ತಮ್ಮದಾಗಿಸಿಕೊಂಡರು.
ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಸಿಂಧು ಕೇವಲ 27 ನಿಮಿಷಗಳಲ್ಲಿ ಜಾಕೋಬ್ಸನ್ ಅವರನ್ನು 21–4, 21–10 ರಿಂದ ಮಣಿಸಿ ಶುಭಾರಂಭ ಮಾಡಿದರು. ಕಳೆದ ವಾರ ಹಾಂಗ್‌ಕಾಂಗ್ ಓಪನ್‌ನಲ್ಲಿ ಸಿಂಧು ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಮತ್ತೊಬ್ಬ ಆಟಗಾರ್ತಿ ಡೇನ್ ಲಿನ್ ಕ್ರಿಸ್ಟೋಫರ್ಸನ್ ಅವರಿಗೆ ಮಣಿದಿದ್ದರು.
ಮಿಶ್ರ ಡಬಲ್ಸ್‌ನಲ್ಲಿ ರುತ್ವಿಕಾ ಗದ್ದೆ– ರೋಹನ್ ಕಪೂರ್ ಜೋಡಿ ಕೂಡ ಹೊರಬಿತ್ತು. ಇವರಿಬ್ಬರು 17–21, 11–21ರಲ್ಲಿ ಜಪಾನ್‌ನ ಯುಇಚಿ ಶಿಮೊಗಾಮಿ– ಸಯಾಕಾ ಹೊಬಾರ ಅವರಿಗೆ ಸೋತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.