ನಾಪೋಕ್ಲು: ಆತಿಥೇಯ ಕುಂಡ್ಯೋಳಂಡ ತಂಡವು ಕೊಡಗು ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಚೆರಿಯಪಂಡ ತಂಡದ ವಿರುದ್ಧ ಗೆಲುವು ದಾಖಲಿಸಿತು.
ದಿವಿನ್ ದೇವಯ್ಯ, ಪ್ರಧಾನ್ ಪೊನ್ನಣ್ಣ, ಕೆ.ಟಿ.ಕಾರ್ಯಪ್ಪ ಮತ್ತು ಪೊನ್ನಪ್ಪ ದಾಖಲಿಸಿದ ಗೋಲುಗಳ ನೆರವಿನಿಂದ ಆತಿಥೇಯ ತಂಡವು ಜಯಿಸಿತು. ಅಂಜಪರವಂಡ ತಂಡದ ಆಟಗಾರರಾದ ಹೇಮಂತ್, ಅವಿನ್ ಚಿಟ್ಟಿಯಪ್ಪ ಹಾಗೂ ದೀಪಕ್ ಸುಬ್ಬಯ್ಯ ತಲಾ ಒಂದು ಗೋಲು ಗಳಿಸಿದರೆ, ಅಂಜಪರವಂಡ ಚಿರಾಗ್ ಎರಡು ಗೋಲು ಗಳಿಸಿ ಒಟ್ಟು ಐದು ಗೋಲುಗಳನ್ನು ದಾಖಲಿಸಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. ಆ ಮೂಲಕ ಅಂಜಪರವಂಡ ಪಳಂಗಿಯಂಡ ವಿರುದ್ಧ ಗೆಲುವು ಸಾಧಿಸಿತು.
ಚೊಟ್ಟೆಕಮಾಡ ತಂಡದಲ್ಲಿ ಏಳು ಹಿರಿಯ ಆಟಗಾರರು ಆಡಿ ಗಮನ ಸೆಳೆದರು. ಮಾಜಿ ಸೈನಿಕರಾದ ಸಿ.ಎನ್.ಪೂವಯ್ಯ, ರಮೇಶ್, ಸಿ.ಎಂ.ಪೂವಯ್ಯ, ಮಾಜಿ ಎಸ್ಐ ಸಿ.ಪಿ.ಮಾದಪ್ಪ, ಜಬ್ಬೂಮಿ ಚಾರಿಟಬಲ್ ಟ್ರಸ್ಟ್‌ನ ಸಂಚಾಲಕ ರಾಜೀವ್ ಬೋಪಯ್ಯ ತಂಡದ ಪರ ಇದ್ದರು. ಇತರೆ ಪಂದ್ಯಗಳಲ್ಲಿ ಬೊಳ್ಳೆಪಂಡ ವಾಟೇರಿರ ವಿರುದ್ಧ 1-0 ರಿಂದ ಚಿರಿಯಪಂಡ ಅದೇಂಗಡ ವಿರುದ್ಧ 2-0 ರಿಂದ ಗೆಲುವು ಸಾಧಿಸಿತು.
ಮಾಚಿಮಂಡ ಬಾಚಮಂಡ ವಿರುದ್ಧ, ಕೊಂಗಂಡ ಚೊಟ್ಟೇಮಾಡ ವಿರುದ್ಧ, ಅರೆಯಡ ದೇಯಂಡ ವಿರುದ್ಧ 3-0 ಅಂತರದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದವು. ಕಲಿಯಂಡ ಚೆರುವಾಳಂಡ ವಿರುದ್ಧ 4-0 ರಿಂದ ಜಯ ಗಳಿಸಿದರೆ ಕೇಲಪಂಡ ಅವರೇಮಾದಂಡ ವಿರುದ್ಧ 2-1 ರಿಂದ ಜಯಗಳಿಸಿತು. ಅಮ್ಮಂಡ ಮುದ್ದಿಯಂಡ ವಿರುದ್ಧ 2-1 ರಿಂದ, ಚೇನಂಡ ನಂಬುಡಮಾಡ ವಿರುದ್ಧ 2-0 ರಿಂದ, ಕರೋಟಿರ ಕಲ್ಲಂಗಡ ವಿರುದ್ಧ 4-0 ರಿಂದ, ಮಂಡೀರ (ನೆಲಜಿ) ಕೂಪದಿರ ವಿರುದ್ಧ 1-0 ರಿಂದ, ತೀತಮಾಡ ಬೈರೇಟಿರ ವಿರುದ್ಧ 3-0 ರಿಂದ, ತಿರುತೆರ ಪುಲಿಯಂಡ ವಿರುದ್ಧ 3-0 ರಿಂದ, ಕುಟ್ಟಂಡ ಮಾಪಂಗಡ ವಿರುದ್ಧ 3-0 ರಿಂದ ಮುನ್ನಡೆ ಸಾಧಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.