ADVERTISEMENT

ಕನಸುಗಳ ಬೆನ್ನತ್ತಿ ಯಶಸ್ಸು ಸಾಧಿಸಿ: ಸಿ.ಎಸ್‌. ಸಂತೋಷ್

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 19:30 IST
Last Updated 11 ಆಗಸ್ಟ್ 2020, 19:30 IST
ಸಿ.ಎಸ್‌. ಸಂತೋಷ್
ಸಿ.ಎಸ್‌. ಸಂತೋಷ್   

ಬೆಂಗಳೂರು: ಕನಸುಗಳು ಹಾಗೂ ಮಹದಾಸೆಗಳನ್ನು ಬೆನ್ನತ್ತಿ ಜೀವನದಲ್ಲಿ ಯಶಸ್ಸು ಸಾಧಿಸಿ ಎಂದು ಅಂತರರಾಷ್ಟ್ರೀಯ ಮೋಟರ್‌ಸ್ಪೋರ್ಟ್ಸ್ ಪಟು ಸಿ.ಎಸ್‌. ಸಂತೋಷ್‌ ಹೇಳಿದರು.

ಇಲ್ಲಿಯ ಪಿಇಎಸ್‌ ತಂತ್ರಜ್ಞಾನ ಸಂಸ್ಥೆ ವಿಶ್ವವಿದ್ಯಾಲಯವು ಆನ್‌ಲೈನ್‌ ಮೂಲಕ ಹಮ್ಮಿಕೊಂಡಿದ್ದ ‘ದಿ ಲಾಸ್ಟ್‌ ಒನ್‌ ಸ್ಟ್ಯಾಂಡಿಂಗ್‘ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತುಗಳನ್ನು ಹೇಳಿದರು.

‘ನಮ್ಮನ್ನು ಪ್ರೇರೇಪಿಸುವ ಮತ್ತು ನಮ್ಮನ್ನು ಸದಾ ತುದಿಗಾಲಲ್ಲಿ ನಿಲ್ಲುವಂತೆ ಮಾಡುವ ನಮ್ಮ ಚಟುವಟಿಕೆಗಳನ್ನು ಪತ್ತೆಹಚ್ಚುವುದೇ ಯಶಸ್ಸು. ನಮ್ಮ ಸಾಮರ್ಥ್ಯಗಳನ್ನು ಅರಿತುಕೊಂಡು ಮುನ್ನಡೆಯುವುದು ಮುಖ್ಯ’ ಎಂದು ಅವರು ನುಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.