ADVERTISEMENT

ಹಾಕಿ: ಭಾರತದ ಜಯ ತಪ್ಪಿಸಿದ ಇಂಗ್ಲೆಂಡ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 20:49 IST
Last Updated 1 ಆಗಸ್ಟ್ 2022, 20:49 IST
ಗೋಲು ಗಳಿಸಿದ ಸಂಭ್ರಮದಲ್ಲಿ ಭಾರತದ ಆಟಗಾರರು (ನೀಲಿ)  –ಪಿಟಿಐ ಚಿತ್ರ
ಗೋಲು ಗಳಿಸಿದ ಸಂಭ್ರಮದಲ್ಲಿ ಭಾರತದ ಆಟಗಾರರು (ನೀಲಿ)  –ಪಿಟಿಐ ಚಿತ್ರ   

ಬರ್ಮಿಂಗ್‌ಹ್ಯಾಮ್: ಪಂದ್ಯದ ಮೊದಲಾರ್ಧ ಅವಧಿಯಲ್ಲಿ ಮೂರು ಗೋಲುಗಳ ಮುನ್ನಡೆಯಿದ್ದರೂ ಜಯ ಗಳಿಸಲು ಭಾರತ ತಂಡಕ್ಕೆ ಸಾಧ್ಯವಾಗಲಿಲ್ಲ. ದಿಟ್ಟ ಆಟವಾಡಿದ ಇಂಗ್ಲೆಂಡ್ 4–4ರಿಂದ ಸಮಬಲ ಸಾಧಿಸಿತು.

ಸೋಮವಾರ ನಡೆದ ಬಿ ಗುಂಪಿನ ಪುರುಷರ ಹಾಕಿ ಪಂದ್ಯದಲ್ಲಿ ಲಲಿತ್ ಉಪಾಧ್ಯಾಯ (3ನೇ ನಿ), ಮನದೀಪ್ ಸಿಂಗ್ (13 ಮತ್ತು 22 ನಿ) ಪ್ರಥಮಾರ್ಧದಲ್ಲಿಯೇ ಭಾರತಕ್ಕೆ 3–0 ಮುನ್ನಡೆ ಗಳಿಸಿಕೊಟ್ಟಿದ್ದರು. 46ನೇ ನಿಮಿಷದಲ್ಲಿಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಿನಲ್ಲಿ ಪರಿವರ್ತಿಸಿದರು.

ದ್ವಿತೀಯಾರ್ಧದಲ್ಲಿ ಪುಟಿದೆದ್ದ ಇಂಗ್ಲೆಂಡ್ ಆಟಗಾರರು ಅಮೋಘ ಆಟವಾಡಿದರು. ಲಿಯಾಮ್ ಅನ್ಸೆಲ್ (42ನೇ ನಿ), ನಿಕ್ ಬ್ಯಾಂಡುರಕ್ (47ನೆ ನಿ, 53ನಿ) ಹಾಗೂ ಫಿಲ್ ರಾಪರ್ (53 ನಿ) ಗೋಲು ಗಳಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಪಂದ್ಯದ ಮುಕ್ತಾಯಕ್ಕೆ ಎರಡು ನಿಮಿಷ ಬಾಕಿಯಿದ್ದಾಗ ಇಂಗ್ಲೆಂಡ್‌ ಪೆನಾಲ್ಟಿ ಅವಕಾಶ ಪಡೆದಿತ್ತು. ಭಾರತದ ರಕ್ಷಣಾ ಪಡೆಯು ಇಂಗ್ಲೆಂಡ್ ಗೋಲು ಗಳಿಕೆಯ ಗುರಿಯನ್ನು ತಪ್ಪಿಸಿದರು.

ADVERTISEMENT

ಬುಧವಾರ ನಡೆಯುವ ಪಂದ್ಯದಲ್ಲಿ ಭಾರತವು ಕೆನಡಾ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.