ADVERTISEMENT

ಯಶ್ವಂತ್, ಸುನಿಲ್‌ಗೆ ಅಗ್ರಸ್ಥಾನ

ದಸರಾ ಉತ್ಸವದ ಪುರುಷರ ಫ್ರೀಸ್ಟೈಲ್‌ ಕುಸ್ತಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 20:01 IST
Last Updated 14 ಅಕ್ಟೋಬರ್ 2018, 20:01 IST

ಮೈಸೂರು: ಮೈಸೂರಿನ ಯಶ್ವಂತ್ ಮತ್ತು ಧಾರವಾಡದ ಸುನಿಲ್‌ ಬಿ.ಪಡತಾರೆ ಅವರು ದಸರಾ ಉತ್ಸವದ ಪುರುಷರ ಫ್ರೀಸ್ಟೈಲ್‌ ಕುಸ್ತಿಯಲ್ಲಿ ಅಗ್ರಸ್ಥಾನ ಪಡೆದುಕೊಂಡರು.

ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 125 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಯಶ್ವಂತ್‌ ಅವರು ದಾವಣಗೆರೆಯ ಬಸವರಾಜ್‌ ವಿರುದ್ಧ ಗೆದ್ದರು. ಸುನಿಲ್‌ ಅವರು 97 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಬೆಳಗಾವಿಯ ಸಂಗಮೇಶ ಬಿರಾದಾರ ಅವರನ್ನು ಮಣಿಸಿದರು.

ಫಲಿತಾಂಶ ಹೀಗಿದೆ: 57 ಕೆ.ಜಿ. ವಿಭಾಗ: ಎಸ್‌.ಕೆಂಚಪ್ಪ (ದಾವಣಗೆರೆ)–1, ಕೆ.ಪ್ರವೀಣ್ (ಧಾರವಾಡ)–2, ಪುಂಡಲೀಕ (ಗದಗ)–3

ADVERTISEMENT

61 ಕೆ.ಜಿ. ವಿಭಾಗ: ಸಚಿನ್‌ ಅಂಬೋಜಿ (ಧಾರವಾಡ)–1, ಡಿ.ಆಕಾಶ್ (ದಾವಣ ಗೆರೆ)–2, ಸಂತೋಷ್ ಬಿ (ಬೆಳಗಾವಿ)–3. 65 ಕೆ.ಜಿ. ವಿಭಾಗ: ವೆಂಕಟೇಶ್ (ದಾವ ಣಗೆರೆ)–1, ಶಿವಾನಂದ ತಲ್ವಾರ್ (ಬಾಗಲ ಕೋಟೆ)–2, ಮಲ್ಲೇಶ್ ಎಸ್‌. (ಬೆಳಗಾವಿ), ಶ್ರಾವಣ್‌ ಸಾವಂತ್ (ಕಾರವಾರ)–3.

70 ಕೆ.ಜಿ:ಸದಾಶಿವ (ಧಾರವಾಡ)–1, ಎಸ್‌.ಪಿ.ದೀಪಕ್ (ದಾವಣಗೆರೆ)–2, ರವಿ ಕೆಂಪಣ್ಣವರ್ (ಬಾಗಲಕೋಟೆ), ಸುಜೇಂದ್ರ (ಮೈಸೂರು)–3. 74 ಕೆ.ಜಿ: ಡಿ.ಅನಿಲ್ (ಧಾರವಾಡ)–1, ಹುಸೇನ್‌ ಮುಲ್ಲಾ (ಬೆಳಗಾವಿ)–2, ಪಂಕಜ್‌ಕುಮಾರ್ (ದಾವಣಗೆರೆ)–3. 79 ಕೆ.ಜಿ: ಮಹೇಶ್‌ ಚಲವಾದಿ (ಬಾಗಲಕೋಟೆ)–1, ಎಸ್‌.ಕಿರಣ್ (ದಾವಣಗೆರೆ)–2, ಕೆಂಪಣ್ಣ (ಬೆಳಗಾವಿ), ಬಿ.ಬಸವಂತ್ (ಧಾರವಾಡ)–3. 86 ಕೆ.ಜಿ: ಸತೀಶ್‌ ಪಡತಾರೆ (ಬಾಗಲಕೋಟೆ)–1, ರಿಯಾಜ್‌ ಮುಲ್ಲಾ (ಧಾರವಾಡ)–2, ಪವನ್‌ ಕುಮಾರ್ (ಬೆಳಗಾವಿ)–3. 92 ಕೆ.ಜಿ: ಎನ್‌.ಕಿರಣ್ (ದಾವಣಗೆರೆ)–1, ಸಾಗರ್‌ ಬಿ.ಎಂ (ಬೆಳಗಾವಿ)–2, ಜಿ.ನಾಗಪ್ರಸಾದ್ (ಧಾರವಾಡ), ವಿನೋದ್‌ ಎಸ್‌.ಕೆ (ಬಾಗಲಕೋಟೆ)–3. 97 ಕೆ.ಜಿ: ಸುನಿಲ್‌ ಬಿ ಪಡತಾರೆ (ದಾವಣಗೆರೆ)–1, ಸಂಗಮೇಶ ಬಿರಾದಾರ (ಬೆಳಗಾವಿ)–2, ಸಾಗರ್‌ ಉಳ್ಳಾಗಡ್ಡಿ (ಬಾಗಲಕೋಟೆ)–3.

125 ಕೆ.ಜಿ: ಆರ್‌.ಯಶ್ವಂತ್ (ಮೈಸೂರು)–1, ಬಸವರಾಜ್‌ (ದಾವಣಗೆರೆ)–2, ಬೀರೇಶ್ (ಬೆಳಗಾವಿ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.