ADVERTISEMENT

ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್: ಕರ್ನಾಟಕಕ್ಕೆ ಎರಡು ಚಿನ್ನ

ಅನೀಶ್ ಗೌಡ ಮಿಂಚು

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 14:43 IST
Last Updated 22 ಜೂನ್ 2025, 14:43 IST
ಕರ್ನಾಟಕದ ಅನೀಶ್ ಎಸ್ ಗೌಡ   –ಪ್ರಜಾವಾಣಿ ಚಿತ್ರ ಸಂಗ್ರಹ
ಕರ್ನಾಟಕದ ಅನೀಶ್ ಎಸ್ ಗೌಡ   –ಪ್ರಜಾವಾಣಿ ಚಿತ್ರ ಸಂಗ್ರಹ   

ಭುವನೇಶ್ವರ್: ಕರ್ನಾಟಕದ ಈಜುಪಟುಗಳು ಭಾನುವಾರ ಇಲ್ಲಿ ಆರಂಭವಾದ 78ನೇ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನ ಸೇರಿದಂತೆ ಒಟ್ಟು ಆರು ಪದಕಗಳನ್ನು ಗೆದ್ದುಕೊಂಡರು. 

ಪುರುಷರ 200 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಬೆಂಗಳೂರಿನ ಅನೀಶ್ ಎಸ್ ಗೌಡ ಅವರು ಚಿನ್ನದ ಪದಕ ಗೆದ್ದರು.  ಇದೇ ವಿಭಾಗದಲ್ಲಿ ಕರ್ನಾಟಕದ ಶಾನ್ ಗಂಗೂಲಿ ಕಂಚು ಪಡೆದರು. ತನೀಶ್ ಜಾರ್ಜ್ ಮ್ಯಾಥ್ಯೂ, ಚಿಂತನ್ ಎಸ್‌ ಶೆಟ್ಟಿ, ಎಸ್. ದರ್ಶನ್, ಅನೀಶ್ ಎಸ್ ಗೌಡ ಅವರಿದ್ದ ತಂಡವು 4X200 ಮೀ ಫ್ರೀಸ್ಟೈಲ್‌ನಲ್ಲಿ ಬಂಗಾರದ ಪದಕ ಗೆದ್ದಿತು. 

ಪುರುಷರ 200 ಮೀ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಎಲ್. ಮಣಿಕಂಠ ಬೆಳ್ಳಿ ಪದಕ ಜಯಿಸಿದರು. 

ADVERTISEMENT

ಮಹಿಳೆಯರ ವಿಭಾಗದಲ್ಲಿ ಕರ್ನಾಟಕದ ತಾನ್ಯಾ ಷಡಕ್ಷರಿ ಬೆಳ್ಳಿ ಜಯಿಸಿದರು. 100 ಮೀ ಬಟರ್‌ಫ್ಲೈನಲ್ಲಿ ಸೃಷ್ಟಿ ಉಪಾಧ್ಯಾಯ ಮತ್ತು ಆಸ್ತಾ ಚೌಧರಿ ಅವರು 1ನಿಮಿಷ, 03.50 ಸೆಕೆಂಡುಗಳಲ್ಲಿ ಏಕಕಾಲಕ್ಕೆ ಗುರಿ ತಲುಪಿ ಪ್ರಶಸ್ತಿ ಹಂಚಿಕೊಂಡರು. ದಿನಿಧಿ ದೇಸಿಂಗು ನಂತರದ ಸ್ಥಾನ ಪಡೆದರು. 

ಫಲಿತಾಂಶಗಳು:  ಪುರುಷರು: 200 ಮೀ ಫ್ರೀಸ್ಟೈಲ್: ಅನೀಶ್ ಎಸ್ ಗೌಡ (ಕರ್ನಾಟಕ; 1ನಿ,50.85ಸೆ)–1, ಸಜನ್ ಪ್ರಕಾಶ್ (ಪೊಲೀಸ್)–2, ಶಾನ್ ಗಂಗೂಲಿ (ಕರ್ನಾಟಕ)–3. 

200 ಮೀ ಬ್ರೆಸ್ಟ್‌ಸ್ಟ್ರೋಕ್: ಧನುಷ್ ಸುರೇಶ್ (ತಮಿಳುನಾಡು; 2ನಿ, 19.17ಸೆ)–1, ಎಲ್‌. ಮಣಿಕಂಠ (ಕರ್ನಾಟಕ; 2ನಿ,20.56ಸೆ)–2, ರಾಣಾ ಪ್ರತಾಪ್ (ಎಸ್‌ಎಸ್‌ಸಿಬಿ)–3. 

4X200 ಮೀ ಫ್ರೀಸ್ಟೈಲ್: ಕರ್ನಾಟಕ (ತನೀಶ್ ಜಾರ್ಜ್ ಮ್ಯಾಥ್ಯೂ, ಚಿಂತನ್ ಎಸ್‌ ಶೆಟ್ಟಿ, ಎಸ್. ದರ್ಶನ್, ಅನೀಶ್ ಎಸ್ ಗೌಡ; ಕಾಲ: 7ನಿ,40.90ಸೆ)–1, ಮಹಾರಾಷ್ಟ್ರ (ಅಥರ್ವ ಜಯಸಿಂಗ್ ಸಂಕಲ್ಪ, ಶುಭಮ್ ದಾದಾಸೊ ದಾಯಗುಡೆ, ಓಂ ಪ್ರವೀಣ ಸತಾಂ, ರಿಷಭ್ ಅನುಪಮ್ ದಾಸ್)–2, ಎಸ್‌ಎಸ್‌ಸಿಬಿ (ಉನ್ನಿಕೃಷ್ಣನ್, ಎಸ್. ಅದರ್ಶ್, ಜಿ. ಸಂಪತ್‌ ಕುಮಾರ್ ಯಾದವ್, ಆನಂದ್)–3. 

ಮಹಿಳೆಯರು: 200 ಮೀ ಬ್ರೆಸ್ಟ್‌ಸ್ಟ್ರೋಕ್‌: ಹರ್ಷಿತಾ ಜಯರಾಮ್ (ಆರ್‌ಎಸ್‌ಪಿಬಿ; 2ನಿ,37.72ಸೆ)–1, ತಾನ್ಯಾ ಷಡಕ್ಷರಿ (ಕರ್ನಾಟಕ; 2ನಿ,39.41ಸೆ)–2, ಮನ್ನತ್ ಮಿಶ್ರಾ (ಮಹಾರಾಷ್ಟ್ರ)–3.

100 ಮೀ ಬಟರ್‌ಫ್ಲೈ: ಸೃಷ್ಟಿ ಉಪಾಧ್ಯಾಯ (ಒಡಿಶಾ; 1ನಿ,03.50ಸೆ ), ಆಸ್ತಾ ಚೌಧರಿ (ಆರ್‌ಎಸ್‌ಪಿಬಿ 1ನಿ,03.50ಸೆ ) – 1,  ದಿನಿಧಿ ದೇಶಿಂಗು (ಕರ್ನಾಟಕ; 1ನಿ,03.52ಸೆ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.