ADVERTISEMENT

ಹಾಕಿ: ಚಮತ್ಕಾರದ ಗೋಲಿಗಾಗಿ ಪ್ರಶಸ್ತಿ ಗೆದ್ದ ದೀಪಿಕಾ

ಪಿಟಿಐ
Published 16 ಜುಲೈ 2025, 14:14 IST
Last Updated 16 ಜುಲೈ 2025, 14:14 IST
ಹಾಕಿ
ಹಾಕಿ   

ನವದೆಹಲಿ: ಭಾರತ ಹಾಕಿ ತಂಡದ ಮುಂಚೂಣಿ ಆಟಗಾರ್ತಿ ದೀಪಿಕಾ ಅವರು ಕೌಶಲದ ಗೋಲಿಗಾಗಿ ‘ಪಾಲಿಗ್ರಾಸ್‌ ಮ್ಯಾಜಿಕ್‌ ಸ್ಕಿಲ್‌’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಭುವನೇಶ್ವರದಲ್ಲಿ ನಡೆದ 2024–25ನೇ ಸಾಲಿನ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಅವರು ಆ ಚಮತ್ಕಾರದ  ಫೀಲ್ಡ್ ಗೋಲು ಗಳಿಸಿದ್ದರು.

ಕೌಶಲ ಮತ್ತು ಸೃಜನಶೀಲ ಆಟದಿಂದ ಗಳಿಸಿದ ಗೋಲನ್ನು ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗುತ್ತದೆ. ಈ ಪ್ರಶಸ್ತಿಗೆ ಅಂತಿಮಗೊಂಡ ಆಟಗಾರರನ್ನು ವಿಶ್ವದಾದ್ಯಂತ ಹಾಕಿ ಅಭಿಮಾನಿಗಳು ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ.

ವಿಶ್ವದ ಅಗ್ರಮಾನ್ಯ ತಂಡದ ವಿರುದ್ಧ ಆ ಪಂದ್ಯದಲ್ಲಿ, ದೀಪಿಕಾ 35ನೇ ನಿಮಿಷ ಏಕಾಂಗಿಯಾಗಿ ಎಡಗಡೆಯಿಂದ ಮುನ್ನುಗ್ಗಿ ಚೆಂಡನ್ನು ಡ್ರಿಬಲ್‌ ಮಾಡಿ ಎದುರಾಳಿ ಡಿಫೆಂಡರ್‌ಗಳನ್ನು ತಪ್ಪಿಸಿಕೊಂಡು ಗೋಲು ಗಳಿಸಿದ್ದರು. ಭಾರತ ಆ ಪಂದ್ಯದಲ್ಲಿ 0–2 ಹಿನ್ನಡೆಯಲ್ಲಿತ್ತು. ಆ ಗೋಲಿನಿಂದ ಭಾರತ ಚೇತರಿಸಿತ್ತು. ನಂತರ ಸ್ಕೋರ್ 2–2 ಸಮನಾಗಿ ಶೂಟೌಟ್‌ನಲ್ಲಿ ನೆದರ್ಲೆಂಡ್ಸ್ ಗೆದ್ದಿತ್ತು.

ADVERTISEMENT

‘ನನಗೆ ಪ್ರಶಸ್ತಿ ದೊರಕಿರುವುದು ದೊಡ್ಡ ಗೌರವ. ನೆದರ್ಲೆಂಡ್ಸ್‌ನಂಥ ತಂಡದ ಎದುರು ಗೋಲು ಗಳಿಸಿದ ಆ ಗೋಲು ನಿಜಕ್ಕೂ ವಿಶೇಷ ಎನಿಸುತ್ತದೆ. ನನ್ನ ಸಹ ಆಟಗಾರ್ತಿಯರು, ಕೋಚ್‌ಗಳು, ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದಿದ್ದಾರೆ 21 ವರ್ಷ ವಯಸ್ಸಿನ ದೀಪಿಕಾ.

‘ಇದು ನನಗೆ ಮಾತ್ರ ದೊರೆತ ಪ್ರಶಸ್ತಿಯಲ್ಲ. ಇದು ಭಾರತದ ಹಾಕಿಗೆ ಸೇರಿದ್ದು. ಎಲ್ಲರೂ ಜೊತೆಯಾಗಿ ಮುಂದೆ ಸಾಗೋಣ’ ಎಂದು ಹೇಳಿದ್ದಾರೆ.

ದೀಪಿಕಾ ಜೊತೆ, ಸ್ಪೇನ್‌ನ ಪೆಟ್ರೀಷಿಯಾ ಆಳ್ವಾರೆಝ್‌ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡ ಗಳಿಸಿದ ಗೋಲು ಸ್ಪ‍ರ್ಧೆಯಲ್ಲಿದ್ದವು. 

ಪುರುಷರ ವಿಭಾಗದಲ್ಲಿ ಈ ಗೌರವ ಬೆಲ್ಜಿಯಂನ ವಿಕ್ಟರ್‌ ವೆಗ್ನೆಝ್‌ ಅವರ ಪಾಲಾಯಿತು. ಸ್ಪೇನ್‌ ಎದುರು ಮಿಡ್‌ಫೀಲ್ಡ್‌ನಲ್ಲಿ ಅವರು ಆಡಿದ ಚಮತ್ಕಾರಿಕ ಆಟದಿಂದ ತಂಡ ಗೋಲು ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.