
ಬ್ಯಾಂಕಾಕ್: ಭಾರತದ ಉದಯೋನ್ಮುಖ ಆಟಗಾರ್ತಿ ದೇವಿಕಾ ಸಿಹಾಗ್ ಅವರು ಥಾಯ್ಲೆಂಡ್ ಮಾಸ್ಟರ್ಸ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕದ ಸೂಪನೀದಾ ಕೇಟಥಾಂಗ್ ಅವರಿಗೆ ಆಘಾತ ನೀಡಿ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪ್ರವೇಶಿಸಿದರು.
ಶ್ರೇಯಾಂಕರಹಿತ ಆಟಗಾರ್ತಿ ದೇವಿಕಾ ಅವರು ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 21–19, 21–18ರಿಂದ ನೇರ ಗೇಮ್‌ಗಳಲ್ಲಿ ಆತಿಥೇಯ ರಾಷ್ಟ್ರದ ಆಟಗಾರ್ತಿಯನ್ನು ಹಿಮ್ಮೆಟ್ಟಿಸಿದರು.
ವಿಶ್ವ ಕ್ರಮಾಂಕದಲ್ಲಿ 63ನೇ ಸ್ಥಾನದಲ್ಲಿರುವ 20 ವರ್ಷ ವಯಸ್ಸಿನ ದೇವಿಕಾ ನಾಲ್ಕರ ಘಟ್ಟದಲ್ಲಿ ತೈವಾನ್‌ನ ಹುವಾಂಗ್ ಯು–ಸುಮ್ ಅವರನ್ನು ಎದುರಿಸಲಿದ್ದಾರೆ.
ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಇಶಾರಾಣಿ ಬರೂವಾ ಅವರು 21–18, 16–21, 13–21ರಿಂದ ಮಲೇಷ್ಯಾದ ವಾಂಗ್ ಲಿಂಗ್ ಶಿಂಗ್ ವಿರುದ್ಧ ಪರಾಭವಗೊಂಡರು.
ಪುರುಷರ ಸವಾಲು ಅಂತ್ಯ: ತರುಣ್ ಮನ್ನೆಪಲ್ಲಿ ಅವರು ಎಂಟರ ಘಟ್ಟದ ಪಂದ್ಯದಲ್ಲಿ 11–21, 17–21ರಿಂದ ಚೀನಾದ ಝು ಷುವಾನ್ ಶೆನ್ ಎದುರು ಸೋತರು. ಅದರೊಂದಿಗೆ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.