ADVERTISEMENT

ಬ್ಯಾಸ್ಕೆಟ್‌ಬಾಲ್‌: ಜೆಎಸ್‌ಸಿ ಜಯಭೇರಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 19:31 IST
Last Updated 7 ಜುಲೈ 2021, 19:31 IST
ಕಸ್ಟಮ್ಸ್ ಆ್ಯಂಡ್‌ ಜಿಎಸ್‌ಟಿ ತಂಡದ ಕ್ರಿಶನ್‌ (ಬಲ) ಹಾಗೂ ಸಿಎಂಪಿ ತಂಡದ ಆಲ್ವಿನ್‌ ಚೆಂಡಿಗಾಗಿ ಪೈಪೋಟಿ ನಡೆಸಿದರು– ಪ್ರಜಾವಾಣಿ ಚಿತ್ರ
ಕಸ್ಟಮ್ಸ್ ಆ್ಯಂಡ್‌ ಜಿಎಸ್‌ಟಿ ತಂಡದ ಕ್ರಿಶನ್‌ (ಬಲ) ಹಾಗೂ ಸಿಎಂಪಿ ತಂಡದ ಆಲ್ವಿನ್‌ ಚೆಂಡಿಗಾಗಿ ಪೈಪೋಟಿ ನಡೆಸಿದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ಜೆಎಸ್‌ಸಿ ತಂಡವು ಇಲ್ಲಿ ಆರಂಭವಾದ ಪ್ರೊ. ಪರಪ್ಪ ಸ್ಮಾರಕ ರಾಜ್ಯ ‘ಎ’ ಡಿವಿಷನ್ ಬ್ಯಾಸ್ಕೆಟ್‌ಬಾಲ್ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಭರ್ಜರಿ ಜಯ ಗಳಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜೆಎಸ್‌ಸಿ ತಂಡವು ನಮನ್ ಗಳಿಸಿದ 18 ಪಾಯಿಂಟ್ಸ್ ನೆರವಿನಿಂದ 86–29ರಿಂದ ರಾಜ್‌ಮಹಲ್ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡವನ್ನು ಸೋಲಿಸಿತು.

ರಾಜ್‌ಮಹಲ್ ಪರ ಕಾರ್ತಿಕ್ ಒಂಬತ್ತು ಪಾಯಿಂಟ್ಸ್ ಕಲೆಹಾಕಿದರು.

ADVERTISEMENT

ಮತ್ತೊಂದು ಹಣಾಹಣಿಯಲ್ಲಿ ಯಂಗ್ ಒರಿಯನ್ಸ್ 81–59ರಿಂದ ಇಂದಿರಾನಗರ ಬ್ಯಾಸ್ಕೆಟ್‌ಬಾಲ್ ಕ್ಲಬ್‌ಅನ್ನು (ಐಬಿಬಿಸಿ) ಪರಾಭವಗೊಳಿಸಿತು. ವಿಜೇತ ತಂಡದ ಪ್ರತ್ಯಾಂಶು 21 ಪಾಯಿಂಟ್ಸ್ ಗಳಿಸಿದರೆ, ಐಬಿಬಿಸಿಯ ಶಿವರಾಜ್‌ ಕುಮಾರ್‌ 17 ಪಾಯಿಂಟ್ಸ್ ಗಳಿಸಿದರು.

ಇತರ ಪಂದ್ಯಗಳಲ್ಲಿ ಸಿಎಂಪಿ ತಂಡವು 91–40ರಿಂದ ಕಸ್ಟಮ್ಸ್ ಆ್ಯಂಡ್ ಜಿಎಸ್‌ಟಿ ಎದುರು, ಬ್ಯಾಂಕ್ ಆಫ್ ಬರೋಡಾ 77–38ರಿಂದ ಬೀಗಲ್ಸ್ ಬಿಸಿ ಎದುರು ಜಯ ಸಾಧಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.